ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಥಣಿಯಲ್ಲಿ ರಾಜ್ಯಮಟ್ಟದ ಮಾಳಿ ಸಮಾಜದ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭ

ಬೆಳಗಾವಿ|| ಅಥಣಿ ನಗರದಲ್ಲಿರುವ ಗಚ್ಚಿನ ಮಠದಲ್ಲಿ ಶ್ರೀ ಜ್ಯೋತಿಬಾ ಫುಲೆ ಮಾಳಿ ಸಮಾಜ ಯುವಕ ಸಂಘ (ರಿ.) ಅಥಣಿ ಹಾಗೂ ಫುಲೆ ಬ್ರಿಗೇಡ್ ಸಹಯೋಗದಲ್ಲಿ ದಿ. 06/07/2025 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯಮಟ್ಟದ ಮಾಳಿ ಸಮಾಜದ ಪ್ರತಿಭಾ ಪುರಸ್ಕಾರ ನೆರವೇರಿತು.

2024 ಮತ್ತು 2025 ನೇ ಸಾಲಿನ
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪ್ರತಿಶತ 85% ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಗಚ್ಚಿನ ಮಠದ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು, ಮೊಟಗಿ ಮಠದ ಪೂಜ್ಯಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು, ಶೆಟ್ಟರ್ ಮಠದ ಮರುಳಸಿದ್ದ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು.

ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳು ಮಾತನಾಡಿ ಬಸವಣ್ಣನವರ ಕಾಯಕ ಮತ್ತು ತತ್ವಗಳನ್ನು ಮಾಳಿ ಸಮಾಜ ಪಾಲಿಸುತ್ತಾ ಬಂದಿದೆ ಎಂದು ಹೇಳಿದರು.

ಇದೇ ಸಮಾರಂಭದಲ್ಲಿ ಮಾಲಗಾರ ಸಮುದಾಯದ ಅಧ್ಯಕ್ಷರಾದ ಸಿ ಬಿ ಕುಲಗುಡೆ ಮಾತನಾಡಿ ಶೀಘ್ರದಲ್ಲಿ ನಮ್ಮದು ನಿಗಮ ಮಂಡಳಿ ರಚಿಸಬೇಕು ಇಲ್ಲವಾದರೆ ನಾನು ಆಮರಣ ಉಪವಾಸ ನಡೆಸುತ್ತೇನೆಂದು ಹೇಳಿದರು.

ಇದೇ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಪ್ಪಸಾಬ ಕುಲಗುಡೆ, ಅಥಣಿ ಪುರಸಭೆ ಅಧ್ಯಕ್ಷರಾದ ಶಿವಲೀಲಾ ಬುಟಾಳಿ, ಮುಖಂಡರುಗಳಾದ ಎಸ್ ಕೆ ಬುಟಾಳಿ,ಕಾಡಪ್ಪ ಮಾಳಿ, ಶಿವಾನಂದ ದಿವಾನಮಳ, ಗಿರೀಶ್ ದಿವಾನಮಳ, ಪ್ರಶಾಂತ ತೋಡಕರ, ಶ್ರೀಶೈಲ ಹಳ್ಳದಮಳ, ಅರುಣ್ ಮಾಳಿ, ಆನಂದ ಲಗಳಿ, ಬಸವರಾಜ ಬುಟಾಳಿ, ಬಸವರಾಜ ಯಾದವಾಡ, ಸಚಿನ್ ಬುಟಾಳಿ, ರಾಜು ಹಳ್ಳದಮಳ, ಪ್ರಶಾಂತ್ ಗೌರಾಣಿ, ಇನ್ನೂ ಅನೇಕ ಮುಖಂಡರುಗಳು ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತ್ತು ಪಾಲಕರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ವರದಿ. ವಿಠ್ಠಲ ಖೋಕಾಟೆ ಅಥಣಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!