
ಬೀದರ್ /ಬಸವಕಲ್ಯಾಣ : ಪ್ರತಿ ವರ್ಷದಂತೆ ಗುರುಪೂರ್ಣಿಮೆ ನಿಮಿತ್ತ ದಿನಾಂಕ 10.07.2025 ರಂದು ಗುರುವಾರ ಬೆಳಗ್ಗೆ 11:00 ಗಂಟೆಗೆ ನಗರದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ಸಮಸ್ತ ಸದ್ಭಕ್ತರ ವತಿಯಿಂದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾll ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪಾದಪೂಜೆ ಮಾಡಿ ಭಕ್ತಿ ಸಮರ್ಪಿಸಿ ಗುರುವಿನ ಕೃಪಾಶೀರ್ವಾದ ಪಡೆದು ಗುರುವಿನ ಧರ್ಮ ಮಾರ್ಗದ ಆಶೀರ್ವಚನ ಆಲಿಸಿ ಪ್ರಸಾದ ಸ್ವೀಕರಿಸುವುದರ ಮೂಲಕ ಗುರುಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವರದಿ : ಶ್ರೀನಿವಾಸ ಬಿರಾದಾರ



















