ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾನೂನು ಸಲಹೆ ನೀಡಲು ಸೃಜಿಸಲಾಗಿರುವ ಕಾನೂನು ಸಲಹೆಗಾರರ ತಾತ್ಕಾಲಿಕವಾಗಿ ನೇಮಕಾತಿಗೆ ಅರ್ಜಿ ಆಹ್ವಾನ

ಯಾದಗಿರಿ : ಜುಲೈ 08 : ಕಂದಾಯ ಇಲಾಖೆಯ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ನೀಡಲು ಸೃಜಿಸಲಾಗಿರುವ ಕಾನೂನು ಸಲಹೆಗಾರರ ತಾತ್ಕಾಲಿಕವಾಗಿ ನೇಮಕಾತಿಯನ್ನು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಕಂದಾಯ, ಭೂಮಂಜೂರಾತಿ ನಿಯಮ, ಭೂಸುಧಾರಣೆ, ಭೂ ಸ್ವಾಧೀನ ಕಾಯ್ದೆ, ನಿಯಮ, ಇನ್ನಿತರ ಕಾಯ್ದೆ, ನಿಯಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡಲು ಸೃಜಿಸಲಾಗಿರುವ ಕಾನೂನು ಸಲಹೆಗಾರರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ನ್ಯಾಯಾಧೀಶರು, ನಿವೃತ್ತ, ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ)ಗಳಿಗೆ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು 70,000 ರೂ.ಗಳ ಸಂಚಿತ ವೇತನವನ್ನು ಹಾಗೂ ನಿವೃತ್ತ ಕಂದಾಯ ಇಲಾಖೆ ನೌಕರರಿಗೆ (ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರ್) 40,000 ರೂ.ಗಳನ್ನು ನಿಗದಿಪಡಿಸಿ ಆದೇಶಿಸಿದೆ.

ಪ್ರಯುಕ್ತ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿರುವವರನ್ನು, ನಿವೃತ್ತಿ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ), ನಿವೃತ್ತ ಕಂದಾಯ ಇಲಾಖೆ ನೌಕರರಿಗೆ (ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರ್) ಕಾನೂನು ಸಲಹೆಗಾರರಾಗಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು 2025ರ ಜುಲೈ 31ರ ಅಪರಾಹ್ನ 3 ಗಂಟೆ ಒಳಗೆ ಅರ್ಜಿ ಸಲ್ಲಿಸಬೇಕು. ಕಾರಣ ಈ ದಿನಾಂಕ ಒಳಗೆ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿರುವವರು, ನಿವೃತ್ತಿ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ), ನಿವೃತ್ತ ಕಂದಾಯ ಇಲಾಖೆ ನೌಕರರಿಗೆ (ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರ್) ಕಾನೂನು ಸಲಹೆಗಾರರಾಗಿ ತಾತ್ಕಾಲಿಕ ನೇಮಕಾತಿ ಕೋರಿ ಜಿಲ್ಲಾಧಿಕಾರಿಗಳ ಕಛೇರಿ ಯಾದಗಿರಿ ಕಾರ್ಯಾಲಯದ ಆವಕ ಸಂಕಲನಕ್ಕೆ ನೇರವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!