
ಬಳ್ಳಾರಿ/ ಕಂಪ್ಲಿ : ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದಿಂದ ದಿ. 10 ಜುಲೈ 2025 ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನನವನದಲ್ಲಿ ಒಂದು ದಿನದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅತಿಥಿ ಉಪನ್ಯಾಸಕರ ತಾಲೂಕು ಅಧ್ಯಕ್ಷ ಡಾಕ್ಟರ್ ಸಂದೀಪ್ ಕುಮಾರ್ ಮಠದ್ ರವರು ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ 2024 ಅಕ್ಟೋಬರ್ ರಿಂದ ಇಲ್ಲಿಯವರೆಗೆ ಪ್ರತಿನಿತ್ಯ ಆತಂಕದಲ್ಲಿಯೇ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿರುವ ನಮ್ಮನ್ನು ಇತರೆ ಇಲಾಖೆಗಳಂತೆ ಸೇವೆ ಮಾಡುತ್ತಿರುವ ಸೇವೆಯನ್ನು ಪರಿಗಣಿಸಿ, ಖಾಯಂ ಗೊಳಿಸುವಂತೆ ಹಾಗೂ ಸರ್ವೋಚ್ಚ ನ್ಯಾಯಾಲಯ ಬೇರೆ ಪ್ರಕರಣಗಳಲ್ಲಿ ನೀಡಿರುವ ಆದೇಶಗಳಂತೆ ನಮ್ಮ ಸೇವೆಯನ್ನ ವಿಲೀನ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಹಲವು ಬಾರಿ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಮಾಡಿದ್ದೇವೆ
ಕಾನೂನು ತೊಡಗಿದೆ ಎಂದು ರಾಜ್ಯ ಸರ್ಕಾರ ಜಾರಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಯು. ಜಿ. ಸಿ ನಿಯಮಾವಳಿ 2018 ರ ಪ್ರಕಾರ ಅರೆಕಾಲಿಕ /ಅತಿಥಿ / ಗುತ್ತಿಗೆ ಉಪನ್ಯಾಸಕರನ್ನು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕ ಮಾಡುವ ರೀತಿಯಲ್ಲಿ ಅದೇ ಮಾನದಂಡಗಳನ್ನು ಅನುಸರಿಸಿ ನೇಮಕ ಮಾಡಬೇಕು ಹಿಂದಿನಿಂದ ಯಾರು ಕರ್ತವ್ಯ ನಿರ್ವಹಿಸುತ್ತಿದ್ದಾರೋ ಅವರನ್ನೇ ಮತ್ತೆ ಸಂದರ್ಶನಕೊಳಪಡಿಸದೆ ಅವರ ಸೇವೆಯ ಗುಣಮಟ್ಟದ ಬಗ್ಗೆ ಪರೀಕ್ಷಿಸಿ ಪೂರ್ಣಕಾಲಿಕ ಉಪನ್ಯಾಸಕರ ನೇಮಕಾತಿ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
2018ರ ನಿಯಮಾವಳಿಯಂತೆ ಆಗಬೇಕು ಅತಿಥಿ ಉಪನ್ಯಾಸಕರಿಗೆ ನೀಡುವ ಗೌರವ ಧನವು ಒಂದು ಗಂಟೆಗೆ 1500 ರೂಪಾಯಿ ಮಾಸಿಕ 50,000 ಮೀರದಂತೆ ನೀಡಬೇಕೆಂದು ಸೂಚಿಸುತ್ತದೆ,
ಇದೇ ನಿಯಮಾವಳಿ ಅತಿಥಿ ಉಪನ್ಯಾಸಕನಾಗಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಬೇಕು.
ಅತಿಥಿ ಉಪನ್ಯಾಸಕರನ್ನು ಸೇವೆಯನ್ನು ಪರಿಗಣಿಸಿ ಖಾಯಂ ಮಾಡಬೇಕು ಎಂದು ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಿ ಪ್ರತಿಭಟನೆಗೆ ಮೊದಲೇ ಅನುಕೂಲ ಮಾಡಿಕೊಡಬೇಕೆಂಬ ವಿಶ್ವಾಸ ಅಚಲವಾಗಿದೆ ಎಂದು ತಿಳಿಸಿದರು.
ಇಲ್ಲವಾದರೆ ಉಗ್ರವಾದ ಹೋರಾಟ ಅನಿವಾರ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಬಸವರಾಜ ಡಿ. ಕುಮಾರ್ ಕೆ, ಮೈನುದಿನ್ ಭಾಷಾ, ಮಲ್ಲಿಕಾರ್ಜುನ.ಎಚ್, ದಶರಥ, ಮಹಾಲಿಂಗಪ್ಪ, ಆನಂದ್ ಕುಮಾರ್ ಡಾ. ಲಕ್ಷ್ಮೀಬಾಯಿ, ಭವಾನಿ, ರಮೇಶ್ ಪೂಜಾರ್, ಸಣ್ಣಕ್ಕಿ ಮಾರಮ್ಮ, ಮನೋಹರ ಸಿ. ಎಂ. ಸೇರಿದಂತೆ ಇತರರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















