ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಏತ ನೀರಾವರಿ ಯೋಜನೆ ಜಾರಿಗೆ ಬರುವಂತೆ ಮನವಿ ಪತ್ರ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಾಜ್ಯದ ಅತ್ಯಂತ ಹಿಂದುಳಿದ ಕ್ಷೇತ್ರವಾದ ಚಿಂಚೋಳಿ ತಾಲೂಕಿನಲ್ಲಿರುವ ಕೆಳಕಂಡ ಮುಲ್ಲಾಮಾರಿ ಜಲಾಶಯದಿಂದ ಐನಾಪುರ ವಲಯದ ಏತ ನೀರಾವರಿ ಯೋಜನೆಗೆ ಈಗಾಗಲೇ ಘನ ಸರ್ಕಾರವು 95 ಕೋಟಿ ರೂಪಾಯಿಗಳು ನೀಡಿರುವುದು ಸಂತೋಷಕರ ವಿಷಯ. ಆದರೆ ಕಳೆದ 5 ತಿಂಗಳಿನಿಂದ ಯಾವುದೇ ಅಡಿಗಲ್ಲಾಗಲಿ ಅಥವಾ ಪೂಜೆ ಮಾಡದೆ ಇರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹಾಗಾಗಿ ಇಂದು ಐನಾಪುರ ಗ್ರಾಮದಲ್ಲಿ ರಸ್ತೆ ತಡೆ ಮಾಡುವ ಮೂಲಕ ನಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದು,ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಈ ಯೋಜನೆಗೆ ಚಾಲನೆ ನೀಡುವುದರ ಮೂಲಕ ರೈತರ ಬಾಳಲ್ಲಿ ಬೆಳಕನ್ನು ಚೆಲ್ಲಬೇಕೆಂದು ಒತ್ತಾಯಿಸುತ್ತೇವೆ ಎಂದು ಮನವಿ ಪತ್ರವನ್ನು ಕಂದಾಯ ಅಧಿಕಾರಿ ಕೇಶವ ಕುಲಕರ್ಣಿ, ಕರ್ನಾಟಕ ನೀರಾವರಿ ನಿಗಮ ಉಪ ವಿಭಾಗ ಅಭಿಯಂತರ ಅಮೃತ ಪವಾರ್, ತಾಂತ್ರಿಕ ಅಭಿಯಂತರ ತ್ರಿಲೋಚನ್ ಅವರಿಗೆ ಸಲ್ಲಿಸಲಾಯಿತ್ತು .ಏತ ನೀರಾವರಿ ಹೋರಾಟ ಅಧ್ಯಕ್ಷರಾದ ಶಿವಾನಂದ ಮಾಲಿ ಪಾಟೀಲ್, ಕೆ ಪಿ ಆರ್ ಎಸ್ ಅಧ್ಯಕ್ಷರು ಶರಣಬಸಪ್ಪ ಮಮ್ಮಶೆಟ್ಟಿ, ವೀರಣ್ಣ ಗಂಗಾಣಿ ಅಧ್ಯಕ್ಷರು ರೈತ ಸೇನೆ , ಶಿವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಧನರಾಜ ಸ್ವಾಮಿ, ಗೋಪಾಲ ಗಾರಂಪಳ್ಳಿ, ಜಾಫರಖಾನ್ ಮಿರಿಯಾಣ, ಮೋಹನ ಮೇಲಕೇರಿ, ಮಸ್ತಾನ್ ಮುಲ್ಲಾ, ಅಣ್ಣಪ್ಪ ಮುಣಜಿ, ರಾಮಣ್ಣ ನಾಟೀಕಾರ, ನಾಮದೇವ ಮಾಲು, ಸಾಯಿಬಣ್ಣ ರಾಂಪೂರ್, ಮಾನಶೇಟ್ಟಿ ಗಾರಂಪಳ್ಳಿ, ರಾಮಶೇಟ್ಟಿ ಸಲಗರ, ಸಿದ್ದಿಕ್ ತೇಲಿ, ಮಾಣಿಕ ನಾಯಕ, ದತ್ತು ಇಂಚುರ್, ಶಾಮರಾವ ಕೋರವಾರ ಸೇರಿದಂತೆ ಅನೇಕರು ಇದ್ದರು.

ವರದಿ ಚಂದ್ರಶೇಖರ್ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!