ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಗವಾಡದಲ್ಲಿ ಅಂಗನವಾಡಿ ನೌಕರರ ಮುಷ್ಕರ

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಇಂದು ದಿ. 09/07/2025 ರಂದು ಬೆಳಿಗ್ಗೆ ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳಗಾರರ ಪರವಾದ ತಿದ್ದುಪಡಿಗಳನ್ನು ಮಾಡದಿರಲು ಒತ್ತಾಯಿಸಿ ಅಂಗನವಾಡಿ ನೌಕರರು ಮುಷ್ಕರ ಮಾಡಿ ತಮ್ಮ ಮನವಿಯನ್ನು ಮಾನ್ಯ ಕಾಗವಾಡ ತಹಶೀಲ್ದಾರ ಅವರಿಗೆ ನೀಡಿದರು.

“ಇಸ್ ಆಫ್ ಡುಯಿಂಗ್ ಬ್ಯುಸಿನೆಸ್” ಎಂಬ ನೆಪದಲ್ಲಿ ರಾಜ್ಯ ಸರ್ಕಾರದ ಮೇಲೆ ಕಾರ್ಪೊರೇಟ್ ಬಂಡವಾಳಶಾಹಿಗಳು ಹಾಗೂ ಕೇಂದ್ರ ಸರ್ಕಾರವು ಹಲವು ರೀತಿಯ ಒತ್ತಡಗಳನ್ನು ಹೇರುವ ಮೂಲಕ ರಾಜ್ಯದಲ್ಲಿ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲು ನಡೆಯುತ್ತಿರುವ ಪ್ರಯತ್ನಗಳು ಬಹಿರಂಗವಾಗಿದೆ. 2019 ಹಾಗೂ 2020 ರಲ್ಲಿ ಪಾರ್ಲಿಮೆಂಟ್ ನಲ್ಲಿ ಅಂಗೀಕರಿಸಿದ ನಾಲ್ಕು ಲೇಬರ್ ಕೋಡ್ ಗಳನ್ನು ಅನುಷ್ಠಾನಕ್ಕೆ ತಂದರೆ ತನ್ನ ಪ್ರಭಾವವನ್ನು ಕಳೆದುಕೊಳ್ಳುವ ಭಯದಲ್ಲಿರುವ ಒಕ್ಕೂಟ ಸರ್ಕಾರವು, ಆ ಸಂಹಿತೆಗಳಲ್ಲಿರುವ ಹಲವು ಕಾರ್ಮಿಕ ವಿರೋಧಿ ಅಂಶಗಳನ್ನು ರಾಜ್ಯ ಸರ್ಕಾರಗಳ ಮೂಲಕ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಜಾರಿಗೆ ತರುವ ಹಿಂಬಾಗಿಲಿನ ಯತ್ನವನ್ನು ಮಾಡುತ್ತಿದೆ, ಈ ತಿದ್ದುಪಡಿಗಳು ಜಾರಿಯಾದಲ್ಲಿ ರಾಜ್ಯದ ಬಹು ಸಂಖ್ಯೆಯ ಸಂಘಟಿತ, ಅಸಂಘಟಿತ ಕಾರ್ಮಿಕರು ಹಾಗೂ ದುಡಿಯುವ ಜನರು ಕಾನೂನುಗಳ ರಕ್ಷಣೆಯಿಂದ ಹೊರಗೆ ಉಳಿಯುತ್ತಾರೆ ಹಾಗೂ ಈಗಾಗಲೇ ಉದ್ಯೋಗದಲ್ಲಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಂಭವಗಳು ಹೆಚ್ಚಾಗುತ್ತದೆ. ಆದ್ದರಿಂದ ಕಾರ್ಮಿಕ ಕಾನೂನುಗಳಿಗೆ ಮಾಡಿರುವ ತಿದ್ದುಪಡಿಗಳನ್ನು ರಾಜ್ಯಮಟ್ಟದಲ್ಲಿ ಜಾರಿ ಮಾಡಬಾರದೆಂದು ಒತ್ತಾಯಿಸಿ ಈ ಮುಷ್ಕರ ಮಾಡಿದರು.

ಇವರ ಬೇಡಿಕೆಗಳು :

ಗುತ್ತಿಗೆ, ಹೊರಗುತ್ತಿಗೆ ನಿಗದಿತ ಅವಧಿಯ ಉದ್ಯೋಗ, ಆಪ್ರೆಂಟಿಸ್, ಟ್ರೈನಿ, ನ್ಯಾಪ್ಸ್ ಮುಂತಾದ ಹೆಸರಿನಲ್ಲಿ ಕಾರ್ಮಿಕರ ನೇಮಕ ನಿಲ್ಲಿಸಬೇಕು.
ಗುತ್ತಿಗೆ, ಮುಂತಾದ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ತಕ್ಷಣ ಜಾರಿ ಮಾಡಬೇಕು.
ಎನ್‌ಪಿಎಸ್ ಮತ್ತು ಯುಪಿಎಸ್ ರದ್ದುಪಡಿಸಿ, ಹಳೆಯ ಪೆನ್ಸ್ ನ್ ಸ್ಕೀಮ್ ಅನ್ನು ಮರು ಸ್ಥಾಪಿಸಬೇಕು.
ಇಎಸ್ಐ, ಪಿ.ಎಫ್, ಬೋನಸ್ ಪಾವತಿಗಿರುವ ಎಲ್ಲಾ ವೇತನ ಮಿತಿಯನ್ನು ತೆಗೆಯಬೇಕು.
ಗ್ರ್ಯಾಚುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸಬೇಕು.
ಎಲ್ಲರಿಗೂ ಉಚಿತ ಶಿಕ್ಷಣದ ಹಕ್ಕು, ಆರೋಗ್ಯದ ಹಕ್ಕು, ನೀರು ಮತ್ತು ನೈರ್ಮಲ್ಯದ ಹಕ್ಕು ಹಾಗೂ ಎಲ್ಲರಿಗೂ ವಸತಿ ಖಾತ್ರಿಪಡಿಸಬೇಕು.
ನೂತನ ಶಿಕ್ಷಣ ನೀತಿ 2020ನ್ನು ರದ್ದುಪಡಿಸಬೇಕು.
ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಹಾಗೂ ನಿಶ್ಚಿತ ಕಾಲಾವಧಿ ಕಾರ್ಮಿಕ (FTE) ನೇಮಕಕ್ಕೆ ಅವಕಾಶ ನೀಡುವ ಮಾದರಿ ಸ್ಥಾಯಿ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡಿಬೇಕು.
ರಾಜ್ಯ ಸರ್ಕಾರವು ಕಾರ್ಮಿಕರ ನಿವೃತ್ತಿ ವಯಸ್ಸು 60 ವರ್ಷವನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಹಾಗೂ ಎಲ್ಲಾ ವಿಭಾಗದ ದುಡಿಯುವ ಮಹಿಳೆಯರಿಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು.
ಐಟಿ ಕಂಪನಿಗಳಿಗೆ ಸ್ಥಾಯಿ ಆದೇಶಗಳ ಕಾಯ್ದೆಯಿಂದ ನೀಡಿರುವ ವಿನಾಯಿತಿ ರದ್ದುಪಡಿಸಬೇಕು. ಹೊರಗುತ್ತಿಗೆ ನೌಕರರ ಸೊಸೈಟಿ ಪ್ರಸ್ತಾಪ ಕೈಬಿಡಬೇಕು.
ಕಾನೂನು ಬದ್ಧ ಸೇವಾ ನಿಯಮಗಳನ್ನು ಜಾರಿಗೆ ತರಬೇಕು.
ರೈತರ ಒಪ್ಪಿಗೆಯಿಲ್ಲದೆ ಬಲವಂತದ ಭೂ ಸ್ವಾದೀನ ಹಾಗೂ 3 ಕರಾಳ ಕೃಷಿ ಕಾಯ್ದೆ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು.
ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ಹಾಗೂ ಮೆರವಣಿಗೆಗೆ ಇರುವ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.

ಅಂಗನವಾಡಿ ನೌಕರರು ಐವತ್ತು ವರ್ಷಗಳಿಂದ ICDS ಅಡಿಯಲ್ಲಿ ದುಡಿಯುತ್ತಿದ್ದಾರೆ, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಖಾಯಂ ಮಾಡಬೇಕು.
ಕಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂಬುದು ಇವರ ಬೇಡಿಕೆಯಾಗಿದೆ.

ಅಂಗನವಾಡಿ ನೌಕರರ ಹಕ್ಕೊತ್ತಾಯಗಳು

FRS ನ್ನು ಕಡ್ಡಾಯ ಮಾಡಬಾರದು

ಟಿ ಹೆಚ್ ಆರ್ ಮೂಲಕ ಫಲಾನುಭವಿಗಳ ಘೋಷಣಾ ಟ್ರ್ಯಾಕ್ಟರ್ ನ ಕೆಲಸಗಳಲ್ಲಿ ಅಂಗನವಾಡಿ ನೌಕರಿಗೆ ತೊಂದರೆ ಕೊಡಬಾರದು.

ಗುಜರಾತ್ ಹೈ ಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು,

29 ಕಾರ್ಮಿಕ ಕಾನೂನುಗಳನ್ನು ಉಳಿಸಿ. ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಬೇಕು,

ICDS ಯೋಜನೆಗೆ ಬಜೆಟ್ಟನ್ನು ಹೆಚ್ಚಿಸಬೇಕು. ಫಲಾನುಭವಿಗಳಿಗೆ ಕೊಡುವ ಘಟಕ ವೆಚ್ಚ ಹೆಚ್ಚಿಸಬೇಕು.

26,000 ಕನಿಷ್ಠ ವೇತನ, 10000 ಮಾಸಿಕ ಪಿಂಚಣಿ ಕೊಡಬೇಕು,

ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ ಪ್ರಾರಂಭ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು.

ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು,

BLO ಮತ್ತು ಜನಗಣತಿ ಮುಂತಾದ ಕೆಲಸಗಳಿಗೆ ನೇಮಿಸಬಾರದು.

ಮೇಲ್ಕಂಡ ಬೇಡಿಕೆಗಳಿಗಾಗಿ ಒತ್ತಾಯಿಸಿ ಜುಲೈ 9ರಂದು ಅಂಗನವಾಡಿ ಬಂದ್ ಮಾಡಿ, ಸಾರ್ವತ್ರಿಕ ಮುಷ್ಕರ ಮಾಡಿದರು.

ಈ ಮುಷ್ಕರದಲ್ಲಿ ಸುವರ್ಣ ಕಮತಗಿ,ಆಕಾಸಿನಿ ಗುಂಜಾಲೆ ,ಸುಮಿತ್ರಾ ಮುಗಳಿ, ಸೀವಂತಾ ಕಾಂಬಳೆ ,ಸವಿತಾ ಪೂಜಾರಿ , ಇಂದುಮತಿ ಬೀಳಗಿ,
ಮಾಯಾ ಕಾಂಬಳೆ,ರೂಪಾ ಸಲಾಗರ್, ಸುರೇಖಾ ಚಿಂಚಲಿ, ಸಾವಿತ್ರಿ ಕಾಂಬಳೆ, ಕಸ್ತೂರಿ ಬೆಟಗಾರ್,
ಸುನಂದಾ ಮಂಗರುಳ,ಛಾಯಾ ಕಾಲುತಿ, ಇನ್ನೂ ಅನೇಕ ಅಂಗನವಾಡಿ ನೌಕರಸ್ಥರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

ವರದಿ. ವಿಠ್ಠಲ ಖೋಕಾಟೆ ಅಥಣಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!