ಶಿವಮೊಗ್ಗ: ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯ ಎಲ್ಲಾ 6 ವೈದ್ಯರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಮಾಡಿದೆ. ವರ್ಗಾವಣೆ ಆದೇಶವನ್ನು ಹಿಂಪಡೆಯುವಂತೆ ತೀರ್ಥಹಳ್ಳಿಯ ಸಮಾನ ವಯಸ್ಕರ ವೇದಿಕೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ತೀರ್ಥಹಳ್ಳಿ ತಾಲ್ಲೂಕು ಜೆ. ಸಿ ಆಸ್ಪತ್ರೆ ಅತ್ಯುತ್ತಮ ಆಸ್ಪತ್ರೆಯಾಗಿದ್ದು, ಸ್ವಚ್ಛತೆ ಹಾಗೂ ಉತ್ತಮ ಚಿಕಿತ್ಸೆ ನೀಡುವಲ್ಲಿ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಶ್ರಮಿಸುತ್ತಾರೆ. ಇಲ್ಲಿ ಉತ್ತಮ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ರೋಗಿಗಳಲ್ಲದೆ ಅಕ್ಕ ಪಕ್ಕ ತಾಲೂಕಿನ ರೋಗಿಗಳು ಸಹ ಚಿಕಿತ್ಸೆ ಪಡೆದು ರೋಗದಿಂದ ಗುಣಮುಖರಾಗಿದ್ದಾರೆ. ಆದರೆ ಸರ್ಕಾರ ಉತ್ತಮ ವೈದ್ಯರನ್ನು ವರ್ಗಾವಣೆಗೊಳಿಸಿ ಜನ ವಿರೋಧಿ ನಡೆ ಎಂದು ಸಮಾನ ವಯಸ್ಕರ ವೇದಿಕೆ ದಿನಾಂಕ 10/7/25 ರ 11ಗಂಟೆಗೆ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಸಮಾನ ವಯಸ್ಕರ ವೇದಿಕೆಯ ಒಬ್ಬರು ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹಾಗೂ ಹಾಲಿ ಸದಸ್ಯರದ ಶ್ರೀಯುತ ಸಪ್ಪುಗುಡ್ಡೆ ರಾಘವೇಂದ್ರರವರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಒತ್ತಾಯ ಮಾಡಬೇಕಾಗಿ ಕೋರಿದ್ದಾರೆ.
ವರದಿ. ಪ್ರಸಾದ್ ಎಚ್ ಬಿ ತೀರ್ಥಹಳ್ಳಿ.



















