
ಬೆಳಗಾವಿ/ಅಥಣಿ :ಗುರುವಾರ ದಿನಾಂಕ 10/07/2025 ರಂದು ಬೆಳಿಗ್ಗೆ ಪರಿಸರ ಸಂರಕ್ಷಣೆ ಹಾಗೂ ಹಸಿರು ಕ್ರಾಂತಿಯ ಉದ್ದೇಶದಿಂದ ಅಥಣಿ ತಾಲೂಕಿನ ಹಳ್ಯಾಳ ರಸ್ತೆಯಲ್ಲಿ ಇರುವ ಪುರಸಭೆ ಸದಸ್ಯರಾದ ಶ್ರೀ ಸಂತೋಷ ಸಾವಡಕರ ಅವರ ಮಾಲಿಕತ್ವದ ಶ್ರೀ ಮುರುಘೇಂದ್ರ ಪೆಟ್ರೋಲ್ ಪಂಪದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ವೃಕ್ಷಾರೋಪಣ ಮಾಡುವ ಮೂಲಕ ಚಾಲನೆ ನೀಡಿದರು.
“ಪರಿಸರ ಸಂರಕ್ಷಣೆ ಇಂದು ಅತಿ ಅವಶ್ಯಕವಾಗಿದೆ, ನಾವು ನೆಡುವ ಪ್ರತಿಯೊಂದು ಸಸಿಯು ಭವಿಷ್ಯದ ಪೀಳಿಗೆಗೆ ಉಸಿರಾಟದ ಭರವಸೆ ನೀಡುತ್ತದೆ. ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ಸಸಿಯನ್ನು ನೆಡಬೇಕು” ಎಂದು ಶಾಸಕರಾದ ಲಕ್ಷ್ಮಣ ಸವದಿ ಅವರು ಹೇಳಿದರು. ಅದಲ್ಲದೆ ಅಥಣಿ ಪಟ್ಟಣವನ್ನು ಹಸರಿಕರಣ ಮಾಡುವ ಉದ್ದೇಶದಿಂದ ತಾಪಮಾನವನ್ನು ನಿಯಂತ್ರಣ ಮಾಡುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು.
ಅಂತರ್ಜಲ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ ಯಂಕಚ್ಚಿ, ಅಥಣಿಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ಎಸ್. ಕೆ .ಬಟಾಳಿ, ಅಥಣಿ ಪುರಸಭೆಯ ಮುಖ್ಯಾಧಿಕಾರಿಗಳಾದ ಶ್ರೀ ಅಶೋಕ ಗುಡಿಮನಿ, ಅಥಣಿಯ RFO ರಾದ ಶ್ರೀ ರಾಕೇಶ್ ಅರ್ಜುನವಾಡ , ಅಥಣಿಯ THO ರಾದ ಶ್ರೀ ಬಸಗೌಡ ಕಾಗೆ , ಅಥಣಿಯ ಪಿಎಸ್ಐ ಸಾಹೇಬರಾದ ಶ್ರೀ ಗಿರಮಲಪ್ಪ್ ಉಪ್ಪಾರ , ಪುರಸಭೆ ಸದಸ್ಯರಾದ ಸಂತೋಷ ಸಾವಡ್ಕರ್ ,ದತ್ತಾ ವಾಸ್ಟರ್, ಮಲ್ಲಿಕಾರ್ಜುನ್ ಬುಟಾಳಿ, ರಾಮನಗೌಡ ಪಾಟೀಲ್, ಬೀರಪ್ಪ ಯಂಕಚ್ಚಿ, ಹಾಗೂ ಸರ್ವ ಪುರಸಭೆ ಸದಸ್ಯರು ಹಾಗೂ ಹಿರಿಯ ಮುಖಂಡರು ಮತ್ತು ಜನಸ್ತೋಮ ಪಾಲ್ಗೊಂಡು ಈ ಸಮಾರಂಭಕ್ಕೆ ಶೋಭೆ ತಂದರು.
ವರದಿ. ವಿಠ್ಠಲ ಖೋಕಾಟೆ ಕರುನಾಡ ಕಂದ ಅಥಣಿ.



















