ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಹಾಗೂ ಕಾರವಾರ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್
ಉತ್ತರ ಕನ್ನಡ/ಕಾರವಾರ: ಮಂಚ (ಹಾಸಿಗೆ- ಬೆಡ್ ) ವಿಷಯದಲ್ಲಿ ಲಂಚ ಕೇಳಲು ಹೋದ ಆರೋಪದಡಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯಕೀಯ ಅಧೀಕ್ಷಕ ಹಾಗೂ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಅವರು ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೇಳೆಯೇ ಲೋಕಾಯುಕ್ತ ಡಿವೈಎಸ್ ಪಿ ಧನ್ಯಾ ನಾಯಕ್ ಅವರು ನೇತೃತ್ವದ ತಂಡವು ದಾಳಿ ಮಾಡಿದ್ದು, ಲಂಚ ಪಡೆಯುವಾಲೇ ಸಿಕ್ಕಿ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಕಾರವಾರ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಅವರು ರೋಗಿಗಳ ಹಾಸಿಗೆ ಟೆಂಡರ್ ಗೆ ಸಂಬಂಧಿಸಿ ಗುತ್ತಿಗೆದಾರರೊಬ್ಬರಿಗೆ 75 ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು, ಇದೇ ಕಮಿಷನ್ ಹಣವನ್ನು ಪಡೆಯುವಾಗ ಲೋಕಾಯುಕ್ತರು ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಡ್ ಸೀಟ್ ಹಾಗೂ ಫರ್ನಿಚರ್ ಗುತ್ತಿಗೆದಾರ ಮೋಹಿಸಿನ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮೊದಲ ಕಂತಿನ ಹಣ 20 ಸಾವಿರ ರೂ. ಹಣವನ್ನು ನೀಡಿದ್ದರು. ಉಳಿದ ಬಾಕಿ 30 ಸಾವಿರ ರೂಪಾಯಿ ಹಣ ನೀಡುವಂತೆ ಮತ್ತೆ ಒತ್ತಡ ಹಾಕಿದ್ದರು. ಮೌಸಿನ್ ಅಹಮದ್ ಶೇಕ್ ಉಳಿದ 30 ಸಾವಿರ ರೂಪಾಯಿ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆಸಲಾಗಿದ್ದು, ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದಿರುವ ಡಾ. ಕುಡ್ತಲಕರ್ ಅವರನ್ನು ಬಂಧನ ಮಾಡುವ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಲಂಚ ಪಡೆಯುವಾಗಲೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ವರದಿ ಸುಶಾಂತ್ ಭೋವಿ



















