ಬಳ್ಳಾರಿ/ ಕಂಪ್ಲಿ : ರಾಜ್ಯದ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ ಕಂಪ್ಲಿ ಕ್ಷೇತ್ರದ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನರೇಗಾ ನೌಕರರಿಗೆ 6 ತಿಂಗಳ ಬಾಕಿ ವೇತನ ಬಿಡುಗಡೆ ಮಾಡಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಕುರುಗೋಡು ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕ ಜೆ. ಎನ್. ಗಣೇಶ ಇವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ನರೇಗಾ ನೌಕರರ ಜಿಲ್ಲಾ ಸಂಘಟನೆ ಕಾರ್ಯದರ್ಶಿ ಹೆಚ್.ಹನುಮೇಶ್ ಮಾತನಾಡಿ, ಅರೋಗ್ಯ ವೆಚ್ಚ, ಮಕ್ಕಳ ಶಾಲಾ ಫಿಜು, ಇಎಂಐ ಪಾವತಿ, ಕುಟಂಬ ನಿರ್ಹವಣೆ, ಮನೆ ಬಾಡಿಗೆ ವೆಚ್ಚ, ದಿನ ನಿತ್ಯ ಪ್ರಯಾಣದ ವೆಚ್ಚ ಇನ್ನೆರಡು ದಿನದಲ್ಲಿ ವೇತನ ಪಾವತಿಯಾಗದ ಹಿನ್ನಲೆ ನರೇಗಾ ಯೋಜನೆಯ ಕೆಲಸ ಕಾರ್ಯಗಳನ್ನು ಸ್ಥಗೀತಗೊಳಿಸಿ ಕಳೆದ ಸೋಮವಾರದಿಂದ ಆಸಹಕಾರ ಚಳುವಳಿ ಮಾಡಿತ್ತಿದ್ದು, ನಮ್ಮ ವೇತನ ಆಗುವ ತನಕ ಅಸಹಕಾರ ಚಳುವಳಿಯನ್ನು ಮಾಡಲಾಗುತ್ತದೆ, ಆದ್ದರಿಂದ ಸ್ಥಳೀಯ ಶಾಸಕರು ಗಮನ ಹರಿಸಿ, ವೇತನವನ್ನು ಪಾವತಿ ಮಾಡಿಸಲು ಸಂಬಂಧಪಟ್ಟ ಮಂತ್ರಿಗಳ ಜೊತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಆದಷ್ಟು ಬೇಗ ನಮ್ಮ ವೇತನ ಮಾಡಿಸಲು ಕ್ರಮ ತೆಗದುಕೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನರೇಗಾ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ್, ಟಿಸಿ ಮಲ್ಲಿಕಾರ್ಜುನ, ಟಿಐಇಸಿ ಚಂದ್ರಶೇಖರ, ಎಂಇಎಸ್ ಸಂಯೋಜಕರಾದ ಬಿ.ಸಿದ್ದೇಶ್ವರ, ಮುಕ್ತಯಕ್ಕ, ನರೇಗಾ ತಾಂತ್ರಿಕ ಸಹಾಯರಾದ ಅರುಣಾಜ್ಯೋತಿ, ಲೋಕೇಶ್, ತಿಪ್ಪೇಶ್, ಲೋಕೇಶ್, ಬಸವರಾಜ, ಆಂಜಿನೇಯ, ವೀಣಾ, ಕನಕರಾಯ, ಬಿಎಫ್‌ಟಿಗಳಾದ ಚನ್ನವೀರ, ಭಾಷಾ, ಪಂಪಾಪತಿ, ರಫೀಕ್, ರಾಘವೇಂದ್ರ, ಹೊನ್ನೂರ, ಮರೇಶ್, ಹನುಮಂತ, ಜಿಕೆಎಂಗಳಾದ ಶಿಲ್ಪಾ, ಹೊನ್ನೂರಮ್ಮ, ಮಂಜುಳಾ, ಸುಣಗಾರ ರೇಣುಕಮ್ಮ, ರಂಜನಿ, ಅಮೃತಾ, ಅಂಬುಜಾ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















