ನವದೆಹಲಿ : ಕುಡುಕನೊಬ್ಬ ಆಲ್ಕೋಹಾಲ್ ಆಸೆಯಿಂದ ಮದ್ಯದಂಗಡಿಯ ಕಿಟಕಿಯಲ್ಲಿ ಕೈಹಾಕಿ ಸಾರಾಯಿ ಬಾಟಲಿ ಕದಿಯಲು ಪ್ರಯತ್ನಿಸಿದ್ದಾನೆ. ಆಲ್ಕೋಹಾಲ್ ಬಾಟಲಿಯನ್ನು ಹಿಡಿದ ಆತ ಲಿಕ್ಕರ್ ಶಾಪ್ನ ಕಿಟಕಿಯ ಸರಳಿನ ನಡುವೆ ಸಿಲುಕಿದ್ದಾನೆ.
ಈ ತಮಾಷೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆ ಕುಡುಕ ಯಾರು, ಇದು ಎಲ್ಲಿ ನಡೆದ ಘಟನೆ ಎಂಬುದು ತಿಳಿದಿಲ್ಲ. ಸುತ್ತಮುತ್ತಲಿನವರ ಸತತ ಪ್ರಯತ್ನದ ನಂತರ ಆತನ ಕುತ್ತಿಗೆಯನ್ನು ಸರಳಿನ ಮಧ್ಯದಿಂದ ಬಿಡಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















