ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮದರ್ ಮುಜೀದ ಶಾಲೆಯ ಆಡಳಿತ ಮಂಡಳಿಯ ಉದ್ಘಾಟನಾ ಸಮಾರಂಭ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಮದರ್ ಮುಜೀದ ಅಲ್ಪಸಂಖ್ಯಾತರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಉದ್ಘಾಟನೆಯನ್ನು ಶಾಸಕ ಎಂ. ಆರ್. ಮಂಜುನಾಥ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮದರ್ ಮುಜೀದ ಶಾಲೆಯ ಕಾರ್ಯದರ್ಶಿ ಅಂಜುಮ್ ಪಾಷಾ ಅವರು ಮಾತನಾಡಿ ಶಾಸಕರಾದ ಮಂಜುನಾಥ್ ಅವರು ನಮ್ಮ ಶಾಲೆಯ ಆಡಳಿತ ಕಚೇರಿಯ ಉದ್ಘಾಟನೆ ಮಾಡಿದ್ದು ತುಂಬಾ ಸಂತೋಷದ ವಿಷಯ ಮುಂದಿನ ದಿನಗಳಲ್ಲಿ ಮಾನ್ಯ ಶಾಸಕರ ಬೆನ್ನೆಲುಬಾಗಿ, ಅವರ ಹಿಂಬಾಲಕರಾಗಿ, ಸತತವಾಗಿ ಅವರ ಜೊತೆಗೂಡಿ ಟೊಂಕ ಕಟ್ಟಿ ನಿಲ್ಲುತ್ತೇವೆ ಹಾಗೆಯೇ ಮುಂದಿನ ಬಾರಿಯೂ ಇವರೇ ಶಾಸಕರಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಸೆಯಾಗಿದೆ, ನಿಮ್ಮ ಜೊತೆ ನಿಂತು ನಿಮಗೆ ಕೈಜೋಡಿಸುತ್ತೇವೆ ಎಂದರು.

ನಂತರ ಮಾತನಾಡಿದ ಮದರ್ ಮುಜೀದ ಶಾಲೆಯ ಅಧ್ಯಕ್ಷರಾದ ತಯೀಮ್ ಪಾಷಾ ಅವರು ಮಾತನಾಡಿ ನಮ್ಮ ಶಾಲೆಯು ಅಚ್ಚುಕಟ್ಟಾಗಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು ಎನ್ನುವ ಆಸೆ ಇದೆ ಅದಕ್ಕೆ ಶಾಸಕರಾದ ಮಂಜುನಾಥ್ ಅವರ ಸಹಕಾರ ಅತ್ಯಗತ್ಯ ಇದೆ ನೀವು ನಮ್ಮ ಸಂಸ್ಥೆ ಬೆಳೆಯಲು ಸಹಕರಿಸಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ನಂತರ ಶಾಸಕರು ಮಾತನಾಡಿ ನನಗೆ ಮದರ್ ಮುಜೀದ ಶಾಲೆಯ ಆಡಳಿತ ಕಚೇರಿಯ ಕಟ್ಟಡ ಉದ್ಘಾಟನೆ ಮಾಡಲು ಆಹ್ವಾನ ಮಾಡಿದ್ದು ಸಂತಸದ ವಿಷಯ ಹಾಗೆಯೇ ಇದರ ಜೊತೆಗೆ ನೀವು ಮೂರು ಜನ ಅಣ್ಣ ತಮ್ಮಂದಿರು ಹಾಗೂ ಕುಟುಂಬದ ಸದಸ್ಯರು ಮುಂದಿನ ದಿನಗಳಲ್ಲಿ ನನಗೆ ಸಹಕಾರ ನೀಡುತ್ತೇವೆ ಎಂದಿದ್ದು ನನಗೆ ಆನೆ ಬಲ ಬಂದಂತಾಗಿದೆ ಎಂದರು.

ಈ ಸಂಧರ್ಭದಲ್ಲಿ ಮದರ್ ಮುಜೀದ ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ತಯೀಮ್ ಪಾಷಾ, ಕಾರ್ಯದರ್ಶಿ ಅಂಜುಮ್ ಪಾಷಾ, ಆಡಳಿತಾಧಿಕಾರಿ ಜಿಸೀಮ್ ಪಾಷ, ಫಾರುಖ್, ಪ್ರಾಂಶುಪಾಲರಾದ ಮುತ್ತುರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ತಮ್ಮಯ್ಯ ಹಾಗೂ ಮುಖಂಡರುಗಳಾದ ಸೈಯದ್ ಬಶರತ್, ರಾಹೀಲ್, ಹನೂರು ಗೋವಿಂದ, ಮೊಹಮದ್ ರಫೀಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!