ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿಇಓ ಮೋನಾ ರೋತ ಮಾತನಾಡಿ ಇಲ್ಲಿ ಯಾವುದೇ ತರಹದ ಅಭಿವೃದ್ಧಿ ಕೆಲಸಕ್ಕೆ
ಧಕ್ಕೆಯಾಗದಂತೆ ಬೆಟ್ಟದ ಮಾದಪ್ಪನ ಸನ್ನಿಧಿಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ, ಹೀಗಾಗಿ ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ. ಆ ನಿಟ್ಟಿನಲ್ಲಿಯೇ ಪ್ಲಾಸ್ಟಿಕ್ ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ನಂತರ ಮದ್ಯ ನಿಷೇದ ಹಾಗೂ ಸ್ವಚ್ಚತೆ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ಸಿಇಓ ಮೋನಾ ರೋತ, ತಹಶೀಲ್ದಾರ್ ವೈ. ಕೆ ಗುರುಪ್ರಸಾದ್, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಇಒ ಉಮೇಶ್, ಇಇ ಕಿರಣ್, ಎಇಇ ಚಿನ್ನಣ್ಣ, ಎಡಿಎಲ್ ಆರ್ ವಿದ್ಯಾರಾಣಿ, ಇನ್ ಸ್ಪೆಕ್ಟರ್ ಜಗದೀಶ್, ಪಿಡಿಒ ಕಿರಣ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್



















