ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಮತ್ತು ಕಾರ್ಯಕ್ರಮಗಳ ಕುರಿತು ಸಭೆ

ಚಾಮರಾಜನಗರ/ ಹನೂರು :ತಾಲೂಕಿನ ಲ್ಯಾಂಪ್ಸ್ ಭವನದಲ್ಲಿ ಇಂದು ದಿನಾಂಕ 17/07/2025 ಏಟ್ರಿ ಸಂಸ್ಥೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಸ್ಥೆ ಮತ್ತು ಹನೂರು ,ಕೊಳ್ಳೆಗಾಲ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸದಸ್ಯರುಗಳಿಗೆ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ಮತ್ತು ಕಾರ್ಯಕ್ರಮಗಳ ಕುರಿತು ಸಭೆಯನ್ನು ಹನೂರು ನಗರದ ಲ್ಯಾಂಪ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷರಾದ ರಂಗೇಗೌಡ ಅವರು ಅರಣ್ಯ ಹಕ್ಕು ಅನುಷ್ಠಾನ, ಮಹಿಳಾ ಅಧ್ಯಕ್ಷರ ಗ್ರಾಮ ವಾಸ್ತವ್ಯ ಆಲಂಬಾಡಿ ಗ್ರಾಮ, ಹುಲಿ ಯೋಜನೆ ಮ. ಮ. ಬೆಟ್ಟ ಅಂತರಾಷ್ಟ್ರೀಯ ಆದಿವಾಸಿ ಸುಧಾರಣೆ ಬುಡಕಟ್ಟು ಸಂಘ ಹಾಗೂ ಮೈರಾಡ ಸಂಘದ ಒಡಂಬಡಿಕೆ ಸಹಯೋಗ, ಸಂಘದ ಲೆಕ್ಕಪರಿಶೋಧನೆ ಆರೋಗ್ಯ ಸೇವೆಗಳು ಇದರ ಬಗ್ಗೆ ಕೂಲಂಕುಶವಾಗಿ ಸವಿಸ್ತಾರವಾಗಿ ಸಂಘದ ಸದಸ್ಯರಿಗೆ ತಿಳಿಸಿ ಕೊಟ್ಟರು ಮತ್ತು ಅವರಿಂದ ಬರುವ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಈ ಸಂದರ್ಭದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಅಧ್ಯಕ್ಷ ದೊಡ್ಡ ಸಿದ್ದಯ್ಯ ,ಜಿಲ್ಲಾ ಬುಡಕಟ್ಟು ಅಭಿವೃದ್ಧಿ ಸಂಘದ ಅಧ್ಯಕ್ಷರು ರಂಗೇಗೌಡ ,ಕಾರ್ಯದರ್ಶಿ ಸಿ. ಮಾದೇಗೌಡ, ಆದಿವಾಸಿ ಲ್ಯಾಂಪ್ಸ್ ಉಪಾಧ್ಯಕ್ಷರು ಚಂದ್ರಣ್ಣ, ಮಹಿಳಾ ಮುಖಂಡರು ಮಹದೇವಮ್ಮ ರಂಗೇಗೌಡ, ಸಿ. ಮಹಾದೇವ, ಮಹಾದೇವಯ್ಯ, ಮಹದೇವಸ್ವಾಮಿ, ಹುಚ್ಚಯ್ಯ, ಕರಿಯಪ್ಪ ಹಾಗೂ ವಿವಿಧ ಗ್ರಾಮದ ಆದಿವಾಸಿ ಮುಖಂಡರು ಹಾಗೂ ಮಹಿಳೆಯರು ಹಾಗೂ ಯುವಕರು ಇದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!