ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಮಠಕಲ್ ಭಾವಸಾರ ಕ್ಷತ್ರಿಯ ಸಮಾಜ ವತಿಯಿಂದ ಆಷಾಢ ಮಾಸ ; ದೇವಿಗೆ ವಿಶೇಷ ಪೂಜೆ

ಯಾದಗಿರಿ /ಗುರುಮಠಕಲ್ : ಆಷಾಢ ಮಾಸದ ಪವಿತ್ರ ಸಂದರ್ಭವನ್ನು ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದವರು ಭಕ್ತಿಭಾವದಿಂದ ಹಾಗೂ ಸಂಭ್ರಮದೊಂದಿಗೆ ಆಚರಿಸಿದರು.
ಈ ಸಂದರ್ಭದಲ್ಲಿ ಭಾವಾನಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಹಾಗೂ ಯುವಕರು ಸಮಾನವಾಗಿ ಭಾಗವಹಿಸಿದರು. ಮಹಿಳಾ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಭಕ್ತಿಭಾವದ ಅಲಂಕಾರ, ದೇವಿಯ ಮಂಟಪದ ವಿನ್ಯಾಸ ಎಲ್ಲರ ಗಮನ ಸೆಳೆದವು.

ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಭವನ ಆವರಣದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ರವಿವಾರ ಆಷಾಡ ಮಾಸದ ಸಾಮೂಹಿಕ ಭೋಜನ ಏರ್ಪಡಿಸಿದ್ದರು. ಮೊದಲಿಗೆ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡತ ನೇತೃತ್ವದಲ್ಲಿ ಭವಾನಿ ಮಾತೆಗೆ ಪೂಜೆ ಪುನಸ್ಕಾರ, ನೈವೇದ್ಯ ಸಮರ್ಪಣೆಗಳು ನಡೆದವು.

ಸಮಾಜದಲ್ಲಿ ಸಂಬಂಧಗಳು ಗಟ್ಟಿಯಾಗಿ ನೆಲಯೂರಿದಾಗ ಮಾತ್ರ ಒಗ್ಗಟ್ಟು ಪ್ರದರ್ಶನ ತೋರಲು ಸಾಧ್ಯ. ನಮ್ಮ ದೇಶದ ಸಂಸ್ಕೃತಿಯಲ್ಲಿ ಅನೇಕ ಹಬ್ಬ ಹರಿದಿನಗಳ ಆಚರಣೆಗಳು ವಿಶೇಷತೆ ಹೊಂದಿದ್ದು, ಅವುಗಳ ಅಚರಣೆಯಿಂದ ಸಮಾಜದಲ್ಲಿ ಸಾಮರಸ್ಯೆ ಐಕ್ಯತೆ ಮೂಡಿಸುತ್ತದೆ ಎನ್ನುವ ದಿಸೆಯಲ್ಲಿ ಆಷಾಡ ಮಾಸದ ಅಂಗವಾಗಿ ಇಲ್ಲಿನ ಸಮಾಜ ಕ್ಷತ್ರಿಯ ಸಮಾಜದ ಬಾಂಧವರು ವಿಶೇಷ ಸಮಾರಂಭವನ್ನು ಹಮ್ಮಿಕೊಂಡಿದ್ದರು.

ಸಮಾಜದಲ್ಲಿ ಒಗ್ಗಟ್ಟು ಬೆಳಸಲು ಇಲ್ಲಿನ ಭಾವಸಾರ ಕ್ಷತ್ರಿಯ ಸಮಾಜ ಬಾಂಧವರು ಹಿಂದಿನಿಂದಲೂ ಆಷಾಢ ಮಾಸದಲ್ಲಿ ಒಂದೆಡೆ ಕುಳಿತು ಸಾಮೂಹಿಕವಾಗಿ ಊಟ ಸವಿಯುವ ಆಚರಣೆ ಮಾಡಿಕೊಂಡು ಬರುವ ರೂಢಿಯನ್ನು ನಡೆಸಿಕೊಂಡು ಬಂದಿದ್ದಾರೆ. ಆಷಾಢ ತಿಂಗಳಲ್ಲಿ ಎಲ್ಲೆಡೆ ಗಾಳಿ ಹೆಚ್ಚಾಗಿ ಬೀಸುತ್ತಿದ್ದು ಈ ಗಾಳಿ, ಮಳೆಯಿಂದ ರೈತರ ಬೆಳೆ, ಫಸಲು ಹಾಳಾಗಬಾರದು, ರೈತನ ಬದುಕು ಚೆನ್ನಾಗಿದ್ದರೆ ಎಲ್ಲರೂ ಚೆನ್ನಾಗಿರುತ್ತಾರೆ, ಗಾಳಿ ನಿಯಂತ್ರಣಕ್ಕೆ ನಮ್ಮ ಜನಾಂಗದವರು ಈ ಸಂದರ್ಭದಲ್ಲಿ ದೇವರಿಗೆ ಮೊರೆ ಹೋಗುತ್ತಾರೆ ಎಂದು ಭಾವಸಾರ ಕ್ಷತ್ರಿಯ ‌ನೂತನ ಅಧ್ಯಕ್ಷ ಹನುಮಂತರಾವ್ ಢಗೆ ಹೇಳಿದರು.

ದರ್ಜೆ, ದಲ್ಲಾಳಿ, ಬಟ್ಟೆಅಂಗಡಿ, ಕೃಷಿ ಇತರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಈ ಸಮುದಾಯದವರಿಗೆ ರೈತಾಪಿ ವರ್ಗದವರೆ ಆಸರೆ, ರೈತ ನಕ್ಕರೆ ಜಗವೆಲ್ಲಾ ನಗುತ್ತದೆ, ರೈತನ ಬದುಕು ಹಸನಾಗಬೇಕಾದರೆ ಆತ ಬೆಳೆದ ಬೆಳೆಗೆ ಅತಿ ಹೆಚ್ಚಿನ ಮಳೆಯಿಂದ ರೋಗ ರುಜಿನಗಳು ತಗುಲಬಾರದು. ಗಾಳಿಯ ಕಾಟ, ಪ್ರವಾಹ ಭೀತಿ ಇರಬಾರದು ಎಂಬ ಕಾರಣಕ್ಕೆ ಮೊದಲಿಗೆ ಭವಾನಿ ಮಾತೆಗೆ ಪೂಜೆ ಸಲ್ಲಿಸಿ ನಂತರ ದೇವಿಗೆ ನೈವೇದ್ಯ ಮಾಡಲಾಯಿತು. ಸಮಾಜದವರು ಗುಗ್ಗರಿ, ಕರಿದ ಪದಾರ್ಥಗಳನ್ನು ಬುಟ್ಟಿಯಲ್ಲಿ ಮಿಶ್ರಣ ಮಾಡಿ ಎಲ್ಲರಿಗೂ ಹಂಚಿ ಸಮಾನತೆ ಸಾರಲಾಯಿತು. ಮಹಿಳೆಯರು ಆರತಿ ಬೆಳಗಿ ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ಊಟ ಸವಿಯನ್ನು ಸೇವಿಸಿದರು.
ಪೂಜೆಯ ನಂತರ ನಡೆದ ಸಾಮೂಹಿಕ ಭೋಜನ ಕಾರ್ಯಕ್ರಮದಲ್ಲಿ ನೂರಾರು ಸಮಾಜ ಬಾಂಧವರು ಭಾಗವಹಿಸಿ ಆಧ್ಯಾತ್ಮಿಕ ತೃಪ್ತಿಯ ಜೊತೆಗೆ ಸಾಮೂಹಿಕ ಏಕತೆಯ ಅನುಭವವನ್ನು ಹಂಚಿಕೊಂಡರು.

ಸಮಾಜದ ಮುಖಂಡರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಈ ಆಚರಣೆ ಮುಂದಿನ ವರ್ಷಗಳಲ್ಲೂ ಇನ್ನಷ್ಟು ಭಕ್ತಿ ಮತ್ತು ಭರವಸೆಯಿಂದ ನಡೆಯಲಿ ಎಂದು ಆಶಯಪಟ್ಟರು.

ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಹಿರಿಯ ಮುಖಂಡರು, ಯುವಕರು, ಮಹಿಳೆಯರು ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!