ಗುರುಮಠಕಲ್: ಯಾದಗಿರಿ ಭೀಮಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರನ್ನು ಕಲ್ಪಿಸುವ ಸುಮಾರು 24.75 ಕೋಟಿಗಳ ಯೋಜನೆಯಾದ ಅಮೃತ 2.0 ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆದ ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ಸಪ್ತ ಖಾತೆ ಸಚಿವರು, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಮಂಡಳಿಯ ಅಧ್ಯಕ್ಷರು ಆದ ಬಾಬುರಾವ್ ಚಿಂಚನಸೂರ್ ಅವರು ಅಧಿಕಾರಿಗಳಿಗೆ ಗುಣಮಟ್ಟದ ಕೆಲಸ ಮಾಡಲು ಸೂಚನೆ ನೀಡಿದರು.
ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಿ ಪಕ್ಷದ ಹಿರಿಯರಾದ ಬಾಲಪ್ಪ ನೀರೆಟಿ ಅವರ ಆರೋಗ್ಯ ವಿಚಾರಿಸಿದರು, ತದ ನಂತರ ಪಟ್ಟಣದ ಕುಡಿಯುವ ನೀರಿನ ಯೋಜನೆಯ ಕುರಿತಾದ ಮಾಹಿತಿಯನ್ನು ಕಾರ್ಯಪಾಲಕ ಅಭಿಯಂತರರಾದ ಅಶೋಕ್ ರಾಥೋಡ್ ಹಾಗೂ ಅಭಿಯಂತರರಾದ ರಾಜು ಹಬೀಬ್ ಅವರೊಂದಿಗೆ ಯೋಜನೆಯ ನೀಲನಕ್ಷೆಯನ್ನು ವೀಕ್ಷಿಸಿ ಹಂತ ಹಂತವಾಗಿ ಅರಕೇರ ಧರಂಪುರ್ ಒಳಗೊಂಡಂತೆ ಯೋಜನೆಯ ಕಾರ್ಯ ಯಾವ ಹಂತದಲ್ಲಿದೆ ಎಂದು ಸಂಪೂರ್ಣ ಮಾಹಿತಿಯನ್ನು ಪಡೆದರು.
ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಲು, ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ಜರುಗದಂತೆ ಸೂಚನೆ ನೀಡಿದರು.
ಮಲ್ಲಿಕಾರ್ಜುನ್ ಖರ್ಗೆಯವರ ಗುರುಮಠಕಲ ಕ್ಷೇತ್ರದ ಅಭಿವೃದ್ಧಿಗೆ ಮಲ್ಲಿಕಾರ್ಜುನ್ ಖರ್ಗೆಯವರ ಪಾತ್ರ ಮಹತ್ವದ್ದಾಗಿದೆ, ಸದ್ಯ ಭಾಜಪ ಪಕ್ಷ ತನ್ನ ಶಕ್ತಿ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಅವರು ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ರೇಣುಕಾ ಪಡಿಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಚಪೆಟ್ಲಾ, ಪ್ರಮುಖರಾದ ಬಸವರಾಜ ದಳಪತಿ, ಬಾಲಪ್ಪ ನೀರೆಟಿ, ಭೀಮಶಪ್ಪ ರಾಂಪೂರ, ಬಸವಂತರಾಜ ನೀರೆಟಿ, ಭಗವಂತ ರೆಡ್ಡಿ ಕೊಂಕಲ್, ಪುರಸಭೆ ಸದಸ್ಯರಾದ ಖಾಜಾ ಮೈನೋದ್ದೀನ್, ಪಾಪಿರೆಡ್ಡಿ, ಹಾಗೂ ಫೈಯಾಜ್ ಅಹಮದ್, ಮಾಣಿಕ್ ಮುಕಡಿ, ಲಿಂಗಪ್ಪ ತಾಂಡೂರಕರ್, ನರೇಶ್ ಮುದಿರಾಜ, ರವಿ ಉಪ್ಪರಗಡ್ಡ, ಜಗದೀಶ್ ಪೂಜಾರಿ, ಅಶೋಕ್ ಶನಿವಾರಂ ಇತರರು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















