ನಾರಾಯಣಪೇಟೆ – ಗುರುಮಠಕಲ್ ಮುಖ್ಯ ರಸ್ತೆ
ರಸ್ತೆಯಲ್ಲಿ ಜನ ಹೇಗೆ ಓಡಾಡುವುದು… ಕಿರಿದಾದ ರಸ್ತೆ ಅಗಲೀಕರಣ ಯಾವಾಗ?
ಸಾರ್ವಜನಿಕರು ಪ್ರತಿ ನಿತ್ಯ ಈ ರಸ್ತೆ ಮೂಲಕ ಸಂಚಾರಕ್ಕೆ ಬೇಸತ್ತು ಹೋಗಿದ್ದಾರೆ. ಶಾಲೆ ಕಾಲೇಜಿಗೆ ಹೋಗುವ ಮಕ್ಕಳು, ನೆರೆ ರಾಜ್ಯದಿಂದ ಪಾರ್ಶ್ವವಾಯು ಔಷಧಿ ಪಡೆಯಲು ಬರುವ ರೋಗಿಗಳು, ಚಂಡರಿಕಿ, ನಜರಾಪುರ ಸೇರಿದಂತೆ ಸುಮಾರು 6 ರಿಂದ 8 ಗ್ರಾಮಗಳಿಗೆ ಹೋಗುವ ಪ್ರಯಾಣಿಕರು ಇನ್ನೂ ಸ್ಥಳೀಯ ಸಾರ್ವಜನಿಕರು ಎಲ್ಲರಿಗೂ ತೊಂದರೆಯಾಗುತ್ತಿದೆ.
ವಿಶೇಷವಾಗಿ ಬೆಳಿಗ್ಗೆ 9 ರಿಂದ 10 ರ ವರೆಗೆ ಹಾಗೂ ಸಾಯಂಕಾಲ 4 ರಿಂದ 6 ಗಂಟೆ ವರೆಗೆ ಹೆಚ್ಚಾದ ವಾಹನಗಳ ಟ್ರಾಫಿಕ್ ಕಿರಿಕಿರಿ ಸ್ಥಳೀಯ ಸಾರ್ವಜನಿಕರಿಗೆ ಸಾಕಾಗಿ ಹೋಗಿದೆ.
ಈ ರಸ್ತೆ ಅಗಲೀಕರಣ ಸುಮಾರು ಮೂವತ್ತು ವರ್ಷಗಳಿಂದ ಬರಿ ಮಾತಾಗಿ ಉಳಿದಿದ್ದು, ಕಾರ್ಯ ರೂಪಕ್ಕೆ ಬಂದಾಗ ಮಾತ್ರ ಜನ ನಿಟ್ಟುಸಿರು ಬಿಡುತ್ತಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















