ಬಳ್ಳಾರಿ/ ಕಂಪ್ಲಿ : ಕೋಟೆಯ ಹತ್ತಿರದ ತುಂಗಭದ್ರಾ ನದಿ ಮಧ್ಯದ ಬಂಡೆಕಲ್ಲಿನ ಮೇಲೆ ಬೃಹತ್ ಮೊಸಳೆಯ ಕಳೇಬರ ಕಂಡು ಬಂದಿದೆ.
ನದಿ ಸೇತುವೆ ಮೇಲೆ ತೆರಳುತ್ತಿದ್ದ ಸಾರ್ವಜನಿಕರು ಬಂಡೆ ಮೇಲೆ ಮಲಗಿದ್ದ ಮೊಸಳೆಯನ್ನು ಕುತೂಹಲದಿಂದ ನೋಡುತ್ತಿದ್ದರು ಇದನ್ನು ಗಮನಿಸಿದ ಮೀನುಗಾರರು ನದಿಯಲ್ಲಿ ತೆಪ್ಪದ ಮೂಲಕ ಹತ್ತಿರಕ್ಕೆ ಹೋಗಿ ನೋಡಿದಾಗ ಮೊಸಳೆ ಸತ್ತಿರುವುದು ಕಂಡು ಬಂದಿದೆ.
ಬಂಡೆಗಲ್ಲಿನ ಮೇಲೆ ಮೊಸಳೆ ಬೋರಲು ಬಿದ್ದ ಸ್ಥಿತಿಯಲ್ಲಿದ್ದು, ಅದರ ಬಾಲದ ತುದಿ ತುಂಡಾಗಿದೆ ಎಂದು ಮೀನುಗಾರರು ಮಾಹಿತಿ ನೀಡಿದರು.
ಈ ಕುರಿತು ವನ್ಯಜೀವಿ ವಲಯದವರು ಅಥವಾ ಅರಣ್ಯ ಇಲಾಖೆಯವರು ಪರಿಶೀಲಿಸುವಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಮನವಿ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ



















