ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾದಗಿರಿ : ಸಂಚಾರಿ ಪೊಲೀಸ್ ಠಾಣೆಯ ವಿರುದ್ದ ರಾಹುಲ್ ಕೊಲ್ಲೂರಕರ್ ಆಕ್ರೋಶ

ಯಾದಗಿರಿ : ಅಂಬೇಡ್ಕರ್ ಸೇವಾ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ, ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಾರ್ಯವೈಖರಿಯ ಹಾಗೂ ಕಾಶಪ್ಪ ಇವರ ಮೇಲೆ ಶಿಸ್ತು ಕ್ರಮ ಜರುಗಿಸುವ ಕುರಿತು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ದರ್ಪ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ, ಸಂಚಾರಿ ಠಾಣೆಯ ಸಿಬ್ಬಂದಿಗಳು ಒಂದೇ ಜಾಗದಲ್ಲಿ 7 – 8 ಜನ ಗುಂಪು ಕಟ್ಟಿಕೊಂಡು ಬಂದು ಹಳ್ಳಿಯಿಂದ ಬರುವ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಫೈನ್ ಇಲ್ಲದೆ ಹೋದರೆ 200, 300 ಡಿಮ್ಯಾಂಡ್ ಮಾಡುತ್ತಾರೆ ಯಾವುದೇ ರಸೀದಿ ನೀಡುವುದಿಲ್ಲ ಅದೇ ರೀತಿ ಸಾರ್ವಜನಿಕರು ಅವರ ಜೊತೆ ಚರ್ಚೆ ಮಾಡಿದರೆ ದರ್ಪದಿಂದ, ಅವಾಚ್ಯ ಶಬ್ದದಿಂದ ಬೈದು, ಅವರ ವಾಹನವನ್ನು ಜಪ್ತಿ ಮಾಡುತ್ತಾರೆ ಅಲ್ಲದೇ ತಮ್ಮ ಸಿಬ್ಬಂದಿಗಳು ಯಾದಗಿರಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಯಲ್ಲಿ ಗ್ರಾಮೀಣ ಭಾಗದ ಬಡ ರೈತರು, ಕಾರ್ಮಿಕರು, ತರಕಾರಿ, ಇತರೆ ಸಾಮಗ್ರಿ ತರುವ ವಾಹನಗಳಿಗೆ ಅಡ್ಡಗಟ್ಟಿ, ಅವರಿಗೆ ಧಮಕಿ ಹಾಕಿ, ವಾಹನಗಳ ದಾಖಲೆಗಳು ಇದ್ದರೂ ಕೂಡಾ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದು, ನಾಮಿಕಾವಸ್ತೆ ಕೆಲವು ವಾಹನಗಳಿಗೆ ದಂಡ ಹಾಕಿ, ರಸೀದಿಗಳು ನೀಡುತ್ತಿದ್ದು, ಹೀಗಾದರೆ ಬಡ ರೈತರು, ಕಾರ್ಮಿಕರು, ಸಾರ್ವಜನಿಕರು, ಜಿಲ್ಲಾ ಕೇಂದ್ರಕ್ಕೆ ಬಂದು ಹೇಗೆ ಅವರ ವ್ಯಾಪಾರ ಮಾಡಬೇಕು, ಮತ್ತು ಅವರ ಕುಟುಂಬ ಹೇಗೆ ನಡೆಸಬೇಕು, ಅಲ್ಲದೇ ತಮ್ಮ ಠಾಣೆಯ ಸಿಬ್ಬಂದಿಗಳು ರೈತರಿಗೆ ಬಾಯಿಗೆ ಬಂದ ಹಾಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದರ್ಪದ ವರ್ತನೆ ತೋರಿ, ಅವರ ಮೇಲೆ ಹಲ್ಲೆ ಕೂಡಾ ಮಾಡುತ್ತಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ, ಹೊಡೆಯುವ ಅಧಿಕಾರ ಯಾರು ಕೊಟ್ಟಿದ್ದಾರೆ ಮತ್ತು ವಾಹನ ಸವಾರರ ಮೇಲೆ ಹಲ್ಲೆ ಮಾಡಿ, ಅವರ ಮೊಬೈಲ್ ಕಸಿದುಕೊಳ್ಳುತ್ತಿದ್ದು ಇದಕ್ಕೆ ಸಿಸಿ ಟಿವಿ ಪೂಟೆಜ್‌ಗಳಿಲ್ಲ, ಅಪಘಾತಗಳು ಸಂಭವಿಸಿ, ಮರಣ ಹೊಂದುತ್ತಿದ್ದು, ಕೇವಲ ತೊಂದರೆ ಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ, ಸುಮ್ ಸುಮ್ನೆ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಹಾಕುತ್ತಿದ್ದು, ನಿಂತ ವಾಹನಗಳ ಮೇಲೆ ದೌರ್ಜನ್ಯದಿಂದ ಕೇಸ್ ಅಡ್ಡಾ-ದಿಡ್ಡಿಯಾಗಿ ವಾಹನ ಓಡಿಸಿದ್ದಾನೆಂದು ಸುಳ್ಳು ಆರೋಪ ಮಾಡಿ, ಜೀವದ ಜೊತೆ ಆಟ ಆಡುತ್ತಿದ್ದಾರೆ, ಇದು ಎಷ್ಟರ ಮಟ್ಟಿಗೆ ನ್ಯಾಯ ಇದೆ, ಇಲ್ಲಿಯವರೆಗೂ 4 ಚಕ್ರದ ವಾಹನಗಳ ಮೇಲೆ ಡ್ರಿಂಕ್ ಡ್ರೈವ್ ಕೇಸ್ ಎಷ್ಟು ಹಾಕಿದ್ದೀರಿ, ಈ ವಾಹನಗಳು ತಮ್ಮ ಕಣ್ಣಿಗೆ ಸಿಕ್ಕಿಲ್ಲವೇ?, ನಿಮ್ಮ ಈ ದಬ್ಬಾಳಿಕೆಯಿಂದ ರೈತರು, ಜನ ಸಾಮಾನ್ಯರು ಹೆದರಿ ಓಡಾಡುವಂತ ಪರಿಸ್ಥಿತಿ ಉಂಟಾಗಿದೆ, ಅಪಘಾತ ತಡೆಯಬೇಕಾದರೆ ಮೊದಲು ಗುಂಡಿ ಬಿದ್ದ ರಸ್ತೆಗಳ ರಿಪೇರಿ ಮಾಡಲು ಮುಂದಾಗಬೇಕು, ಟ್ರಾಫಿಕ್ ಸಿಗ್ನನ್‌ಗಳಲ್ಲಿ ತಮ್ಮ ಸಿಬ್ಬಂದಿಗಳು ನಿಲ್ಲದೆ, ಸಂಧಿ-ಗೊಂಧಿಯಲ್ಲಿ ನಿಂತು, ಚಂದಾ ವಸೂಲಿಗೆ ಇಳಿದಿದ್ದಾರೆ. ಇದು ಯಾವ ನ್ಯಾಯ ?

ತಮ್ಮ ಸಿಬ್ಬಂದಿಗಳ ಕಣ್ಣಿಗೆ ರಿಜಿಸ್ಪರ್ ಇಲ್ಲದ, ನೇಮ್ ಬೋರ್ಡ ಇಲ್ಲದ ವಾಹನಗಳು ಕಾಣುವುದಿಲ್ಲ ಹಾಗೂ 4 ವೀಲರ್‌ಗಳು ಕೂಡಾ ತಮ್ಮ ಕಣ್ಣಿಗೆ ಕಾಣುವುದಿಲ್ಲ, ಕೇವಲ ದ್ವಿಚಕ್ರ ವಾಹನ, ರೈತರ ಗೂಡ್ಸ್ ಗಾಡಿಗಳು,ಕಾರ್ಮಿಕರ ದ್ವಿಚಕ್ರ ವಾಹನ, ಆಟೋಗಳು, ಟಂಟಂ, ನಿಮಗೆ ಕಣ್ಣುತಿವೆ, ಹೊರತು, 4 ಚಕ್ರದ (ಕಾರ್) ವೀಲರ್‌ಗಳು ತಮಗೆ ಸಿಗುವುದಿಲ್ಲ.
ಈ ತಾರತಮ್ಯ ಯಾಕೆ? ಈ ನಿಮ್ಮ ನಡುವಳಿಕೆ ಹೀಗೆ ಮುಂದುವರೆದರೆ ಎಲ್ಲಾ ರೈತರು, ಕಾರ್ಮಿಕರು, ಸಾರ್ವಜನಿಕರು ಸೇರಿ ತಮ್ಮ ವಿರುದ್ಧ ಹೋರಾಟ ಮಾಡಲಾಗುವುದು ಆದ ಕಾರಣ ಇದಕ್ಕೆ ಕಡಿವಾಣ ಹಾಕಿ, ರೈತರಿಗೆ/ ಕಾರ್ಮಿಕರಿಗೆ/ ಜನ ಸಾಮಾನ್ಯರಿಗೆ ಪ್ರಾಮುಖ್ಯತೆ ನೀಡಿ, ಕಾನೂನಿನ ಚೌಕಟ್ಟಿನಲ್ಲಿ ಕ್ರಮಕ್ಕೆ ಮುಂದಾಗಬೇಕೆಂದು ಎಂದು ರಾಹುಲ್ ಕೊಲ್ಲೂರಕರ್ ಜಿಲ್ಲಾಧ್ಯಕ್ಷರು ಮಾತನಾಡಿದರು.

ಈ ಸಂದರ್ಭದಲ್ಲಿ ಬಂದಪ್ಪ ಕಟ್ಟಿಮನಿ, ಕಾಶೀನಾಥ್ ಕಾಣೆಕಲ್, ಬಿ ಆಂಜನೇಯ ಭಂಡಾರಿ, ಮೋನಪ್ಪ ಮುನೇಪ್ಪನೋರ್, ಸೈದಪ್ಪ ಕೂಲೂರ್, ರಮೇಶ್ ಕ್ಯಾತ್ನಾಳ್, ಮಶಪ್ಪ ಅರಿಕೇರಿ, ರಮೇಶ್ ಗಣಪುರ, ಹಣಮಂತ ಕೊಲ್ಲೂರ್, ಬಾಲು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!