
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದ ಮಹಾದೇವ ದೇವಸ್ಥಾನ ಮಧ್ಯೆವಾಡದ ಹತ್ತಿರ ವಾಸವಿರುವ ಸುಂದ್ರಾಯ್ಯ ರಾಮದಾಸ್ ದೇವಳಿ ಅನಾರೋಗ್ಯಕ್ಕೆ ಒಳಗಾಗಿದ್ದು ಇವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನೀರು ತುಂಬಿರುವುದರಿಂದ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುವಂತಾಯಿತು.
ತಾಲೂಕಿನಲ್ಲಿ ಭಾರೀ ಪ್ರಮಾಣದ ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಿಂದ ನೀರು ಹರಿದು ಬರುತ್ತಿದ್ದು ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಮನೆಗಳಿಗೆ ನುಗ್ಗುತ್ತಿದೆ.
ಮಧ್ಯೆವಾಡಾದ ನೀರು ದಾರಿಯಲ್ಲಿ ತುಂಬಿಕೊoಡಿದ್ದು ಇದರಿಂದ ಕ್ರಿಮಿ ಕೀಟಗಳು ಉತ್ಪತ್ತಿಯಾಗುತ್ತಿದ್ದು ಆದಷ್ಟು ಬೇಗನೆ ಸಂಬoಧಪಟ್ಟ ಅಧಿಕಾರಿಗಳು, ಸರಿಪಡಿಸಿಕೊಡಬೇಕಾಗಿ ಮಧ್ಯೆವಾಡದ ನಿವಾಸಿಗಳು ಆಗ್ರಹಿಸಿದ್ದಾರೆ.
ಸುಂದ್ರಾಯ್ಯ ರಾಮದಾಸ್ ಅವರನ್ನು ದೇವಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಹ ಕರಿಸಿದವರು ಮಹಾದೇವ್ ನಾಯ್ಕ್, ಸುಭಾಷ್ ದೇವಳಿ, ಬೇಗನೆ ಸರಿಪಡಿಸಿ ಕೊಡಬೇಕಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದಂತ ಮಹೇಶ್ ದೇವಳಿ ಆಗ್ರಹಿಸಿದ್ದಾರೆ.
ವರದಿ ಸುಶಾಂತ್ ಭೋವಿ



















