
ಚಾಮರಾಜನಗರ/ ಕೊಳ್ಳೇಗಾಲ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಟಗರಪುರ ಮೋಳೆ ಗ್ರಾಮದ ಭಗೀರಥ ಉಪ್ಪಾರ ಭವನ ಹಾಗೂ ಟಗರಪುರ ಗ್ರಾಮದ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಮತ್ತು ಸಿಸಿ ರಸ್ತೆ ಕಾಮಗಾರಿ, ಆಲಹಳ್ಳಿ ಗ್ರಾಮದ ಅಂಬೇಡ್ಕರ್ ಭವನ ಅಲ್ಲದೇ ಹೊಸ ಮಾಲಂಗಿ ಮತ್ತು ಕಜ್ಜೀಹುಂಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೊಳ್ಳೆಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಚಾಲನೆ ನೀಡಿದರು.
ಈ ವೇಳೆ ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಕುಂತೂರು ಮೋಳೆ ರಾಜೇಂದ್ರ ರವರು‚ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತೋಟೇಶ್ ರವರು‚ ಗ್ರಾ. ಪಂ. ಅಧ್ಯಕ್ಷರಾದ ಮಹದೇವಸ್ವಾಮಿ ರವರು‚ ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಸ್ವಾಮಿ ನಂಜಪ್ಪ ರವರು‚ ಬಿ. ಶಿವಮಲ್ಲು ರವರು‚ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಶಾಂತರಾಜು ಸಿಲ್ಕಲ್ಪುರ ರವರು‚ ಯುವ ಕಾಂಗ್ರೆಸ್ ಮುಖಂಡರಾದ ಚೇತನ್ ದೊರೆರಾಜ್ ರವರು‚ ಹಿರಿಯ ಮುಖಂಡರಾದ ತಾಯಿರೆಗೌಡ ರವರು‚ ನಂಜೇಗೌಡ ರವರು‚ ಸೋಮಶೇಖರ್ ರವರು‚ ಬಸವಣ್ಣ ರವರು‚ ಮಹದೇವ್ಪ್ರಸಾದ್ ರವರು‚ ಎಇಇ ಚಿಕ್ಕ ಲಿಂಗಯ್ಯ ರವರು‚ ನಿರ್ಮಿತಿ ಕೇಂದ್ರದ ಅಭಿಯಾಂತರರಾದ ಪ್ರತಾಪ್ ಸೇರಿದಂತೆ ಸ್ಥಳೀಯ ಗ್ರಾ.ಪಂ. ಚುನಾಯಿತ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ :ಉಸ್ಮಾನ್ ಖಾನ್



















