ಬಾಗಲಕೋಟೆ/ಇಲಕಲ್ಲ : ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮತ್ತು ಸಿದ್ಧಾಂತಗಳನ್ನು ಮೆಚ್ಚಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ನೇತೃತ್ವದಲ್ಲಿ ಇಳಕಲ್ಲ ತಾಲೂಕಿನ ಮಹಿಳೆಯರು ನಿನ್ನೆ ಇಳಕಲ್ಲ ನಗರದ ಮಹಾಂತಸ್ವಾಮಿಗಳ ಗದ್ದುಗೆ ಆವರಣದಲ್ಲಿ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಮತ್ತು ಮಹಿಳಾ ಘಟಕದ ತಾಲೂಕು ಗೌರವಾಧ್ಯಕ್ಷರಾಗಿ ಕಸ್ತೂರಿಬಾಯಿ ಮೆಹರವಾಡೆ, ತಾಲ್ಲೂಕು ಅಧ್ಯಕ್ಷರಾಗಿ ಮಂಜುಳಾ ಅಂಗಡಿ, ಉಪಾಧ್ಯಕ್ಷರಾಗಿ ಶಬಾನಾ ಲಿಂಗಸೂರ, ಪ್ರಧಾನ ಕಾರ್ಯದರ್ಶಿಯಾಗಿ ಮಮ್ತಾಜ್ ಮಕಾನದಾರ, ನಗರ ಮಹಿಳಾ ಘಟಕದ ಗೌರವಾಧ್ಯಕ್ಷರಾಗಿ ಶಂಕ್ರಮ್ಮ ಕೊಪ್ಪರದ, ತಾಲ್ಲೂಕು ಉಪಾಧ್ಯಕ್ಷರಾಗಿ ಸುಮಿತ್ರಾ ಶಿರೂರ, ತಾಲ್ಲೂಕು ಕಾರ್ಯದರ್ಶಿಯಾಗಿ ನೀಲಮ್ಮ ನಾಗಲೀಕರ ಹಾಗೂ ಇನ್ನಿತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಗಣೇಶ ನಾಯಕ, ಹುನಗುಂದ ತಾಲ್ಲೂಕು ಅಧ್ಯಕ್ಷರಾದ ಶರಣು ಗಾಣಿಗೇರ, ತಾಲ್ಲೂಕು ಗೌರವಾಧ್ಯಕ್ಷರಾದ ಶ್ರೀನಿವಾಸ ಮಾರಾ, ಇಳಕಲ್ಲ ಚಾಲಕ ಘಟಕದ ನಗರ ಅಧ್ಯಕ್ಷರಾದ ಮಲ್ಲು ಅಂಗಡಿ, ಸೋಹೈಲ್ ಸುತಾರ, ಮಳೇಂದ್ರಗೌಡ ಗೌಡರ, ಭೀಮಶಿ ಬೀಳಗಿ, ಮಹಿಬೂಬ ಅಳ್ಳೊಳ್ಳಿ ಹಾಗೂ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.
ವರದಿ ನಿಂಬಯ್ಯ ಕುಲಕರ್ಣಿ



















