ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರು ದಸರಾ ಉದ್ಘಾಟನೆಗೆ ಅಧ್ಯಕ್ಷರಾಗಿಮಾಜಿ ಪ್ರಧಾನಿ ದೇವೇಗೌಡರ ಆಯ್ಕೆಗೆ ಒತ್ತಾಯ

ಮೈಸೂರು: ದಸರಾ ಉದ್ಘಾಟನೆ ಅಧ್ಯಕ್ಷರನ್ನಾಗಿ ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸಮಾಜ ಸೇವಕ, ರಕ್ಷಿತ್ ಬಾಲೂರು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು ದೇವೇಗೌಡ ಅವರು ಕನ್ನಡ ನಾಡು – ನುಡಿಗಾಗಿ, ಕನ್ನಡ ನೆಲ – ಜಲದ ಹಿತರಕ್ಷಣೆಗಾಗಿ ತಮ್ಮ ರಾಜಕೀಯ ಬದುಕಿನಲ್ಲಿ ನಡೆಸಿರುವ ಹೋರಾಟ ಅಪಾರ, ಅತ್ಯಮೂಲ್ಯ. ಕಾವೇರಿ ನೀರಿನ ಹಂಚಿಕೆ ವಿವಾದದಲ್ಲಿ ದೇವೇಗೌಡರ ದೂರದೃಷ್ಟಿಯ ಹೋರಾಟಗಳು ,ಆಡಳಿತಾತ್ಮಕ ಕ್ರಮಗಳು ಮುಂದಿನ ಯುವಪೀಳಿಗೆಯ ಆಡಳಿತಗಾರರಿಗೆ ಮಾದರಿ ಆಗುವಂತಹದು ಎಂದು ವಿವರಿಸಿದ್ದಾರೆ.

ರಾಷ್ಟ್ರದ ಪ್ರಪ್ರಥಮ ಕನ್ನಡಿಗ ಪ್ರಧಾನ ಮಂತ್ರಿಗಳಾಗಿ ರಾಷ್ಟ್ರದ ರೈತರ ಹಿತರಕ್ಷಣೆಗೆ ಅವರು ಕೈಗೊಂಡ ಕ್ರಮಗಳು ಅಪಾರ. ರೈತನ ಮಗನಾದ ಹೆಚ್.ಡಿ.ದೇವೇಗೌಡ ರವರನ್ನು ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಗೆ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕು, ಆ ಮೂಲಕ ಕನ್ನಡ ನೆಲ – ಜಲ ಕುರಿತ ಅವರ ಹೋರಾಟಕ್ಕೆ ಅವರ ರೈತಪರ ನಿಲುವಿಗೆ ಗೌರವ ನೀಡಬೇಕೆಂದು ರಕ್ಷಿತ್ ಬಾಲೂರು ಆಗ್ರಹ ಪಡಿಸಿದ್ದಾರೆ.
ತಾವು ಸದ್ಯದಲ್ಲೇ ದೇವೇಗೌಡರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸದ್ಯದಲ್ಲೇ ಮುಖ್ಯಮಂತ್ರಿ ಗಳನ್ನು ಭೇಟಿಯಾಗಿ, ದೇವೇಗೌಡರನ್ನು ಮೈಸೂರು ದಸರಾ ಉದ್ಘಾಟನೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ಕೋರುವ ಒಂದು ಸಾವಿರ ಮಂದಿಯ ಸಹಿಯುಳ್ಳ ಒತ್ತಾಯ ಪತ್ರವನ್ನೂ ಸಲ್ಲಿಸಿರುವುದಾಗಿ ರಕ್ಷಿತ್ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!