ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜುಲೈ 22 ರಂದು ಶ್ರಾವಣ ಮಾಸದ ಪ್ರಯುಕ್ತವಾಗಿ ಮಂಗಳವಾರದಂದು ಹೇರ್ ಸಲೂನ್ ಅಂಗಡಿಗಳು ಓಪನ್

ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕ್ಷೌರದ ಅಂಗಡಿಯ ಮಾಲೀಕರಿಗೆ ತಿಳಿಸುವುದೇನೆಂದರೆ ಇದೇ ಜುಲೈ 24ರಂದು ಶ್ರಾವಣ ಮಾಸದ ನಾಗರ ಅಮವಾಸ್ಯೆ ನಿಮಿತ್ತವಾಗಿ ಇದೇ ಜುಲೈ 22 ರಂದು ಮಂಗಳವಾರ ದಿನದಂದು ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ವೃತ್ತಿಯ ಹೇರ್ ಸಲೂನ್ ಅಂಗಡಿಗಳು ತೆರೆದಿರುತ್ತದೆ ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣಾ ಸಿ ಹಡಪದ ಸಣ್ಣೂರ ಹಾಗೂ ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್.ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ, ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ, ಮತ್ತು ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಹಾಗೂ ಸೇರಿದಂತೆ ಈ ಎಲ್ಲಾ ಮುಖಂಡರ ಅವರ ಆದೇಶದ ಮೇರೆಗೆ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ – ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಈ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.

ಜುಲೈ 24-07-2025 ಗುರುವಾರದಂದು ನಾಗರ ಅಮವಾಸ್ಯೆ (ಶ್ರಾವಣ ಮಾಸ ) ಬಂದ ಕಾರಣದಿಂದಾಗಿ ಈ ಇದೇ 22 ರಂದು ಮಂಗಳವಾರ ಒಂದು ದಿವಸ ಮಾತ್ರ ನಮ್ಮ ಹಡಪದ ಅಪ್ಪಣ್ಣ ( ಕ್ಷೌರಿಕ) ಸಮಾಜದ ವತಿಯಿಂದ. ಎಲ್ಲಾ ‘ಕ್ಷೌರದ” ಸಲೂನ್ ಅಂಗಡಿಗಳು ಓಪನ್ ಮಾಡುವುದಕ್ಕೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನುಮತಿಯನ್ನು ನೀಡಿದೆ. ಮತ್ತೆ ಮುಂದೆ ಎಂದಿನಂತೆ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಯಮದಂತೆ ಮುಂದೆ ಪ್ರತಿ ಮಂಗಳವಾರ ತಮ್ಮ ಎಲ್ಲಾ ‘ಕ್ಷೌರದ” ಅಂಗಡಿಗಳು ಬಂದ್ ಮಾಡಿ ನಿಯಮ ಪಾಲನೆ ಎಲ್ಲರೂ ಮಾಡಿಕೊಂಡು ಹೋಗಬೇಕು ಮತ್ತು ಪ್ರತಿಯೊಬ್ಬ ಗ್ರಾಹಕರು ಸಹಕರಿಸಿ ಈ ಶ್ರಾವಣ ಮಾಸದಲ್ಲಿ (ಒಂದು ತಿಂಗಳ ) ನಿರಂತರವಾಗಿ ಆಚರಣೆಯ ಬಂದಿರುವುದರಿಂದ ಇದೇ 22 ಮಂಗಳವಾರ ದಿನದಂದು ತಮ್ಮ ಸೇವೆ ಮಾಡಲು ನಮ್ಮ ಎಲ್ಲಾ ಕ್ಷೌರ ವೃತ್ತಿಯ ಕಾಯಕ ಬಾಂಧವರು ಸೇವೆಯಲ್ಲಿ ಸನ್ನದ್ದರಾಗಿರುತ್ತಾರೆ. ಆದ ಕಾರಣ ಸಾರ್ವಜನಿಕರು (ಗ್ರಾಹಕರು) ತಾವೆಲ್ಲರೂ ಸಹಕರಿಸಬೇಕೆಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ. ಬಿ.ಹಡಪದ ಸುಗೂರ ಎನ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!