ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಡಿ ಭಾಗದ ಮುಸ್ಲೇಪಲ್ಲಿ ಅಂಗನವಾಡಿ ಶಾಲೆಗೆ ಹಿಡಿದ ಗ್ರಹಣ

ಕಾರ್ಯಕರ್ತೆಯರ ಕಿತ್ತಾಟದಿಂದಾಗಿ ಮಕ್ಕಳಿಗೆ ಸಿಗದ ಪೌಷ್ಟಿಕ ಆಹಾರ- ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದ ಗ್ರಾಮದ ಜನ.

ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕರ್ತವ್ಯ ಲೋಪ ಸ್ಪಷ್ಟವಾಗಿ ಕಾಣುತ್ತಿದೆ – ಶರಣಬಸಪ್ಪ ಎಲ್ಹೇರಿ.

ಅಂಗನವಾಡಿ ಕಾರ್ಯಕರ್ತೆಯ ನೇಮಕಾತಿ ಆದೇಶ ಹಾಗೂ ಉಸ್ತುವಾರಿ ಜವಾಬ್ದಾರಿ ಹಸ್ತಾಂತರ ಕಿತ್ತಾಟ ಒಂದು ವಾರದಿಂದ ಅಂಗನವಾಡಿ ಬೀಗ ಜಡಿದ ಗ್ರಾಮಸ್ಥರು.

ಯಾದಗಿರಿ: ಗುರುಮಠಕಲ್ (ಮಿನಸಪೂರ್): ಗುರುಮಠಕಲ್ ತಾಲೂಕಿನ ಮಿನಸಪೂರ್ ಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ಬರುವ ಮುಸ್ಲೇಪಲ್ಲಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕಳೆದ ಒಂದು ವಾರದಿಂದ ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಗೊಂದಲದಿಂದ ಬೇಸತ್ತ ಗ್ರಾಮಸ್ಥರು ಒಂದು ವಾರದಿಂದ ಅಂಗನವಾಡಿ ಬೀಗ ಹಾಕಿರುವುದು ಈಗ ಚರ್ಚೆಗೆ ಕಾರಣವಾಗಿದೆ.

“ಗಂಡ ಹೆಂಡಿರ ಜಗಳದ ನಡುವೆ ಬಡವಾದ ಕೂಸು” ಈ ಗಾದೆ ಮುಸ್ಲೇಪಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವಿಚಾರವಾಗಿ ಮಕ್ಕಳಿಗೆ ತೊಂದರೆ ಆಗುವಂತೆ ಆಗಿದೆ.

ಅಂಗನವಾಡಿ ಕೇಂದ್ರ ಹಾಗೂ ಕಾರ್ಯಕರ್ತೆಯವರ ಮುಖ್ಯ ಕಾರ್ಯಗಳಾದ ಚಿಕ್ಕ ಮಕ್ಕಳ ಆರೈಕೆ ಮಾಡುವುದು, ಅವರಿಗೆ ಆಟದ ಮೂಲಕ ಕಲಿಕೆ ಮತ್ತು ಬೆಳವಣಿಗೆಗೆ ಸಹಾಯ ಮಾಡುವುದು, ಮತ್ತು ಶಾಲಾಪೂರ್ವ ಶಿಕ್ಷಣ ನೀಡುವುದು,ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಮತ್ತು ಪೂರಕ ಆಹಾರಗಳನ್ನು ಒದಗಿಸುವುದು, ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟುವುದು. ಆರೋಗ್ಯ ಸೇವೆಯಾಗಿರುವ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುವುದು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆಗಳನ್ನು ಮಾಡುವುದು, ಮತ್ತು ಅಗತ್ಯವಿದ್ದಾಗ ವೈದ್ಯಕೀಯ ಚಿಕಿತ್ಸೆಗಾಗಿ ಉಲ್ಲೇಖಿಸುವುದು. ಸಮುದಾಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು, ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವುದರ ಮುಖಾಂತರ ಜಾಗೃತಿ ಮೂಡಿಸುವದು. ಪ್ರತಿ ಮನೆಯವರ ವಿವರಗಳನ್ನು ದಾಖಲಿಸುವುದು, ಜನನ, ಮರಣ ಮತ್ತು ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಇಟ್ಟುಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.

ಆದರೆ ಮುಸ್ಲೇಪಲ್ಲಿ ಅಂಗನವಾಡಿ ಕೇಂದ್ರದಲ್ಲಿ ಈಗ ನೇಮಕವಾಗಿರುವ ಚೌಡಮ್ಮ ಅವರಿಗೆ ಕರ್ತವ್ಯ ನಿರ್ವಹಿಸಲು ಅಲ್ಲಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಮತ ಎನ್ನುವವರು ಹಸ್ತಾಂತರ ಮಾಡದೇ ಇರುವ ಕಾರಣ ಕಳೆದ 12 ನೇಯ ತಾರೀಖಿನಿಂದ ಗ್ರಾಮದ ಸಾರ್ವಜನಿಕರು ಬೀಗ ಹಾಕಿದ್ದಾರೆ.

ಒಂದು ವಾರದಿಂದ ಬೀಗ ಹಾಕಿದ್ದರು, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡದೇ ಇರುವದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.

  • ಶರಣಬಸಪ್ಪ ಎಲ್ಹೇರಿ ಕ.ರ.ವೇ. ಗುರುಮಠಕಲ್ ತಾ. ಅಧ್ಯಕ್ಷರು

ಮೊಬೈಲ್ ಹಾಗೂ ಅಂಗನವಾಡಿ ಸೀಲ್ ನೀಡದೆ, ದೈನಂದಿನ ಚಟುವಟಿಕೆಗಳಾದ ಎಫ್, ಆರ್,ಎಸ್ ಮಾಡುವುದು, ಮಾತೃ ವಂದನಾ, ಮಾತಾಶ್ರೀ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಮೇಲಾಧಿಕಾರಿಗಳು ತ್ವರಿತ ಗತಿಯಲ್ಲಿ ಸಮಸ್ಯೆ ಬಗೆಹರಿಸಲು ಚೌಡಮ್ಮ ಕಾರ್ಯಕರ್ತೆಯ ಅಳಲು.

ಮಕ್ಕಳು, ಗರ್ಭಿಣಿ ಮಹಿಳೆಯರಿಗೆ ಉಪಯೋಗವಾಗಬೇಕಿದ್ದ ಅಂಗನವಾಡಿ ಕೇಂದ್ರ ಆದಷ್ಟು ಬೇಗ ಪ್ರಾರಂಭವಾಗಿ ಕಾರ್ಯನಿರ್ವಹಿಸಬೇಕು ಎನ್ನುವದು ನಮ್ಮ ಆಶಯ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!