ಬಳ್ಳಾರಿ/ ಕಂಪ್ಲಿ: ಕಾಯಿಪಲ್ಲೆ ತರಕಾರಿ ಮತ್ತು ದವಸ ಧ್ಯಾನಗಳ ಸೇವನೆ ಮಾಡುವುದರಿಂದ ಅರೋಗ್ಯ ಕಾಪಾಡಲು ಸುಲಭವಾಗುತ್ತದೆ ಎಂದು ಹಂಪಾದೇವನಹಳ್ಳಿ ಗ್ರಾ. ಪಂ. ಅಧ್ಯಕ್ಷೆ ಕವಿತಾ ಹೇಳಿದರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಜವುಕು ಗ್ರಾಮದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿ ಇಲಾಖೆ ಸಂಜಿವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಜಿಲ್ಲಾ ಮತ್ತು ತಾಲೂಕು ಹಾಗೂ ಗ್ರಾಪಂ ಸಹಕಾರದೊಂದಿಗೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಹಂಪಾದೇವನಹಳ್ಳಿ ಸಂಜೀವಿನಿ ವಾರದ ಸಂತೆ ಮತ್ತು ದಿನಬಳಕೆ ವಸ್ತುಗಳ ಆಹಾರ ಪದಾರ್ಥಗಳ ಕರಕುಶಲ ಗೃಹ ಉಪಯೋಗಕ್ಕೆ ಚಾಲನೆ ನೀಡಿ ಮಾತನಾಡಿ, ವಾರದ ಸಂತೆಯಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ ತರಕಾರಿ ಮಾರಾಟ ಮಾಡಿ ಮೂಲಕ ಅರ್ಥಿಕವಾಗಿ ಸಬಲರಾಗಬಹುದು ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬಹುದು ಸ್ವಚ್ಚತೆ ಕಾಪಾಡಲು ಮುಂದಾಗಬೇಕು ಎಂದರು.
ಹಂಪಾದೇವನಹಳ್ಳಿ ಗ್ರಾ. ಪಂ. ಪಿ.ಡಿ.ಓ ಬೀರಲಿಂಗ ಮಾತನಾಡಿ, ಸಂತೆಯಲ್ಲಿ ಉತ್ತಮವಾದ ಸೋಪು ತರಕಾರಿಗಳು ಸಿಗುತ್ತವೆ ಅವುಗಳನ್ನು ಸದುಪಯೋಗ ಪಡೆಯಿರಿ ಕಸವನ್ನು ಒಂದು ಕಡೆ ಹಾಕಿ ಸ್ವಚ್ಚತೆ ಕಾಪಾಡಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ರಘುರಾಮು, ಎಬಿಪಿ ಸಂಯೋಜಕ ಬಸವನಗೌಡ, ಸಂಜೀವಿನಿ ಮಹಿಳಾ ಒಕ್ಕೂಟ ಅಧ್ಯಕ್ಷೆ ಗಿರಿಜಮ್ಮ, ರಾಜೀವ್ ಗಾಂಧಿ ಫೆಲೋಶಿಪ್ ಸಲ್ಮಾ ಬಿ. ಆರ್.ಪಿ ಅಶ್ವಿನಿ ಮತ್ತು ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಜವುಕು ಗ್ರಾಮದಲ್ಲಿ ಕಾರ್ಯಕರ್ತರು ಸ್ವಸಹಾಯ ಸಂಘದವರು ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















