ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಗರಿ ಗಜಾಪುರ : ತಂಬಾಕು ಖರೀದಿ ಮಾಡದಿದ್ದಲ್ಲಿ ಪ್ರತಿಭಟನೆ ರೈತ ಸಂಘದ ಮುಖಂಡ ಭರ್ಮಣ್ಣ ಎಚ್ಚರಿಕೆ

ವಿಜಯನಗರ ಜಿಲ್ಲೆ ಕೊಟ್ಟೂರು : ವಿ ಟಿ ಎಸ್ ತಂಬಾಕು ಕಂಪನಿಯು , ರೈತರ ತಂಬಾಕನ್ನು ನಿಗಧಿತ ಬೆಂಬಲ ಬೆಲೆಗೆ ಸಮರ್ಪಕವಾಗಿ ಖರೀದಿ ಮಾಡದಿದ್ದಲ್ಲಿ. ಕಂಪನಿಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಹಾಗೂ ಕಾನೂನು ಸಮರ ನಡೆಸಲಾಗುವುದೆಂದು ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ , ಕೋಡಿಹಳ್ಳಿ ಎನ್. ಭರ್ಮಣ್ಣ ಎಚ್ಚರಿಸಿದ್ದಾರೆ.
ಅವರು ಹರಪನಹಳ್ಳಿ ತಾಲೂಕಿನ ಹಗರಿ ಗಜಾಪುರ ಗ್ರಾಮದ , ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಹಿಂಭಾಗದಲ್ಲಿರುವ ವಿಟಿಎಸ್ ತಂಬಾಕು ಖರೀದಿ ಕಂಪನಿ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ , ಕೇಂದ್ರದಲ್ಲಿದ್ದವರನ್ನುದ್ಧೇಶಿಸಿ ಮಾತನಾಡಿ ಎಚ್ಚರಿಸಿದ್ದಾರೆ.
ವಿ ಟಿ ಎಸ್ ತಂಬಾಕು ಕಂಪನಿ ರೈತರಿಗೆ ಅನ್ಯಾಯ ಮಾಡುತ್ತದ್ದು , ತಂಬಾಕನ್ನು ರೈತರಿಗೆ ಮೇ ತಿಂಗಳಲ್ಲಿ ತಂಬಾಕನ್ನು ಭೇಲು ಮಾಡಲು ಹೇಳಿದೆ. ಆದರೆ ಜುಲೈ ತಿಂಗಳಲ್ಲಿ ಖರೀದಿ ಮಾಡಲು ಮುಂದಾಗಿದ್ದಾರೆ , ಅದಲ್ಲದೆ ಕೆಲ ದಿನಗಳ ನಂತರ ಬೇಲೂ ಮಾಡಿದ ತಂಬಾಕು ಸಹಜವಾಗಿ ಕಪ್ಪಾಗಿರುತ್ತದೆ ಹೀಗಾಗಿ ರೈತರಿಗೆ ಈ ತಂಬಾಕನ್ನು ತೆಗೆದುಕೊಳ್ಳದೆ , ರೈತರನ್ನು ವಾಪಸ್ ಕಳುಹಿಸಿರುತ್ತಾರೆ ಇದು ಖಂಡನೀಯವಾದದ್ದು , ಕಂಪನಿಯವರು ಪ್ರತಿ ರೈತರ ತಂಬಾಕನ್ನು ಖರೀದಿ ಮಾಡಬೇಕು. ಸರಿಯಾದ ಸಮಯಕ್ಕೆ ರೈತರ ತಂಬಾಕು ಖರೀದಿ ಮಾಡದಿದ್ದರೆ , ಸಂಬಂದಪಟ್ಟ ಇಲಾಖೆ ಕಛೇರಿ ಮುಂಭಾಗದಲ್ಲಿ ಧರಣಿ ಮಾಡಲಾಗುವುದು ಮತ್ತು ಕಂಪನಿಯ ವಿರುದ್ಧ , ಹಂತ ಹಂತವಾಗಿ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದರು. ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು , ತಾಲೂಕಿನ ವಿವಿಧೆಡೆಯ ರೈತರು ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!