
ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರ ಅನುಪಸ್ಥಿತಿ ಸಲ್ಲದು, ಮಾನವೀಯತೆ ದೃಷ್ಟಿಯಿಂದ ಅವರಿಗೆ ಸಮಲತ್ತು ನೀಡಿ – ಶರಣಗೌಡ ಕಂದಕೂರ.
ಯಾದಗಿರಿ/ಗುರುಮಠಕಲ್ : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಇಂದು ಗುರುಮಠಕಲ್ ಪಟ್ಟಣದ ಪಶು ಆಸ್ಪತ್ರೆಯಲ್ಲಿ ತಾಲೂಕಿನ ವಲಸೆ ಕುರಿಗಾಹಿಗಳಿಗೆ ಶಾಸಕರಾದ ಶರಣಗೌಡ ಕಂದಕೂರ ಅವರು ಗುರುತಿನ ಚೀಟಿ ವಿತರಣೆ ಮಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳ ನಾಡಿದ ಉಪನಿರ್ದೇಶಕರು ಆದ ರಾಜಗೋಪಾಲ್ ದೇಶಮುಖ್ ಅವರು 20 ಕ್ಕಿಂತ ಹೆಚ್ಚು ಕುರಿಗಳನ್ನು ಹೊಂದಿದ್ದು, ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುವ ಕುರಿಗಾಹಿಗಳಿಗೆ, ಸರಕಾರದಿಂದ ನೀಡಲಾಗಿರುವ ಈ ಗುರುತಿನ ಚೀಟಿ ಕುರಿಗಳ ಆರೈಕೆ,ಲಸಿಕೆ ಹಾಗೂ ಅಪಘಾತಗಳು, ಕುರಿಗಳ ಕಳವು ಆದಾಗ ಕುರಿಗಾಹಿಗಳಿಗೆ ರಕ್ಷಾ ಕವಚವಾಗಿ ಅವರ ನೆರವಿಗೆ ಬರಲಿದೆ, ಅಷ್ಟೇ ಅಲ್ಲದೆ ಕುರಿಗಾಹಿಗಳ ಮಕ್ಕಳು ಓದಲು ವಸತಿ ಶಾಲೆಗಳಲ್ಲಿ 10 ಪ್ರತಿಶತ ಮೀಸಲಾತಿ ಸಿಗುವುದು ಜಾನುವಾರು ಆಕಸ್ಮಿಕ ಸಾವು ಆದಾಗ ಮರಣೋತ್ತರ ಪರೀಕ್ಷೆ ಮಾಡಿ ಪರಿಹಾರ ಸಹ ಈ ಗುರುತಿನ ಚೀಟಿ ಹೊಂದಿರುವ ಕುರಿಗಾಹಿಗಳು ಪಡೆಯಬಹುದು ಎಂದು ಹೇಳಿದರು.
ತಾವು ಇರುವ ಸ್ಥಳದಲ್ಲಿಯೇ ಕುರಿಗಳಿಗೆ ಲಸಿಕೆ ಅವುಗಳ ಆರೈಕೆ, ವನ್ಯಜೀವಿಗಳಿಂದ ಕಳ್ಳರಿಂದ ಕುರಿಗಳ ರಕ್ಷಣೆಗೆ ಬಂದೂಕು ಸಹ ವಿತರಿಸಲಾಗುವುದು ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು 113 ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಿ ಈ ಗುರುತಿನ ಚೀಟಿಯ ಸದುಪಯೋಗ ಗ್ರಾಮೀಣ ಭಾಗದ ಜನರು ಈ ಗುರುತಿನ ಚೀಟಿ ಪಡೆಯುವುದರ ಮೂಲಕ ಸರಕಾರದ ಸೌಲಭ್ಯಗಳು ಪಡೆಯಬೇಕು, ಹೆಚ್ಚಿನ ಮಾಹಿತಿಯ ಕೊರತೆಯ ಕಾರಣ ಕಡಿಮೆ ಪ್ರಮಾಣದಲ್ಲಿ ಗುರುತಿನ ಚೀಟಿ ಪಡೆದಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಗುರುತಿನ ಚೀಟಿಯ ಲಾಭಗಳ ಕುರಿತು ತಿಳಿಸಿ ಈ ಗುರುತಿನ ಚೀಟಿ ಹೆಚ್ಚು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಪ್ರಭಾವಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಬಂದೂಕು ಪಡೆದು ಅದರ ದುರ್ಬಳಕೆ ಮಾಡದಿರಲು ಹಾಗೂ ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರು ಸಹ ಸ್ಥಿತಿ ಆಗದಂತೆ ಮಾನವೀಯತೆ ಆಧಾರದ ಮೇಲೆ ಪಶು ಸಂಗೋಪನೆ ಮಾಡುವವರಿಗೆ ಸವಲತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಶಶಿಕಿರಣ ಹಜಾರೆ, ಉಪನಿರ್ದೇಶಕರು ಶರಣಭೂಪಾಲರೆಡ್ಡಿ, ಸಂಜೀವ ರೆಡ್ಡಿ ಸಂಘದ ಅಧ್ಯಕ್ಷರು, ವಿಜಯಕುಮಾರ್ ಪಶು ವೈದ್ಯರು ಸೇರಿದಂತೆ ಸಿಬ್ಬಂದಿಗಳು ಮತ್ತು ವಿವಿಧ ಗ್ರಾಮಗಳಿಂದ ಬಂದಿರುವ ಕುರಿಗಾಹಿಗಳು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















