ಪ್ರತಿಯೊಬ್ಬ ವಿಕಲಾಂಗರಿಗೂ ಒಮ್ಮೆಯಾದರೂ ವಾಹನ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುವೆ- ಶಾಸಕ ಶರಣಗೌಡ ಕಂದಕೂರ.
ಯಾದಗಿರಿ/ ಗುರುಮಠಕಲ್: ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಗುರುಮಠಕಲ್ ತಾಲೂಕ ಆರ್.ಪಿ.ಡಿ ಟಾಸ್ಕ್ ಫೋರ್ಸ್ ಮತ್ತು ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ವಿಕಲಚೇತನರ ಹಕ್ಕೋತ್ತಾಯ ಸಮಾವೇಶ ಹಾಗೂ ವಿಕಲಚೇತನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಗುರುಮಠಕಲ್ ಖಾಸಮಠದ ಶ್ರೀಗಳಾದ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆ ಗುರುಮಠಕಲ್ ಶಾಸಕರಾದ ಶರಣಗೌಡ ಕಂದಕೂರು ಮಾಡಿದರು, ಅಧ್ಯಕ್ಷತೆ ಸಿದ್ದನಗೌಡ ಪಾಟೀಲ ಆರ್ ಪಿ ಡಿ ತಾಲೂಕ ಅಧ್ಯಕ್ಷರು, ಪುರಸಭೆ ಅಧ್ಯಕ್ಷರಾದ ಜಯಶ್ರೀ ಪಾಟೀಲ, ಉಪಾಧ್ಯಕ್ಷ ರೇಣುಕಾ ಪಡಿಗೆ, ತಹಸೀಲ್ದಾರ್ ಶಾಂತಗೌಡ ಬಿರಾದಾರ, ಅಂಬರೀಷ ಪಾಟೀಲ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ, ಶರಣಪ್ಪ ಪಾಟೀಲ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಹಣಮಂತ ರೆಡ್ಡಿ ತಾಲೂಕ ವೈದ್ಯಾಧಿಕಾರಿಗಳು, ಕು.ಉಮಾ ನಾಯಕ, ಸುಭಾಷ್ ಕಟಕಟಿ ವೇದಿಕೆಗೆ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
20 ಹಕ್ಕುಗಳ ಕುರಿತು ಮನವಿ ಶಾಸಕರಿಗೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸುರೇಶ್ ಭಂಡಾರಿ ರಾಜ್ಯಾಧ್ಯಕ್ಷರು ವಿಕಲಚೇತನರ ಕುಂದುಕೊರತೆಗಳು, ಅವರಿಗೆ ಮೀಸಲಿಟ್ಟಿರುವ ಅನುದಾನ ಪಡೆಯುವಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಸಂಪುರ್ಣ ಲಾಭ ಪಡೆಯುವಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಸಹಕಾರ ನೀಡಲು ಶಾಸಕರಲ್ಲಿ ಕೇಳಿದರು.
ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಜನ ಸಾಧಾಕರನ್ನು ಸನ್ಮಾನಿಸಲಾಯಿತು.
ತದ ನಂತರ ಮಾತಾನಾಡಿದ ಶಾಸಕರು ಸಿದ್ದಗಂಗಾ ಕಿರಿಯ ಶ್ರೀಗಳ ಜನ್ಮದಿನದ ಶುಭಾಶಯ ಕೋರಿ, ವಿಕಲ ಚೇತನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿಯವರು ಸುಮಾರು 7 ಸಾವಿರ ಉದ್ಯೋಗ ನೀಡಿ ಅವರಿಗೆ ನೆರವಾಗಿದ್ದರು ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಿ, ವಿಕಲ ಚೇತನರು ದೈಹಿಕವಾಗಿ ನ್ಯೂನತೆಗಳನ್ನು ಹೊಂದಿದ್ದರೂ ನಿಮ್ಮ ಸಾಧನೆಗೆ ವಿಕಲಾಂಗತೆ ಅಡ್ಡಿಯಾಗಬಾರದು, ಇಲ್ಲಿಯವರೆಗೆ ನನ್ನ ಅನುದಾನದಲ್ಲಿ ತ್ರಿಚಕ್ರ ವಾಹನ ಮಾತ್ರ ನೀಡುತ್ತಿದ್ದೆವು, ಈ ಬಾರಿ ಶಾಸಕರಿಗೆ ಇರುವ ಅನುದಾನದ 10% ಅಂದರೆ 20 ಲಕ್ಷ ರೂಪಾಯಿಗಳನ್ನು 21 ಬಗೆಯ ವಿಕಲಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ಒದಗಿಸಲು ಹಾಗೂ ವಿಧಾನಸೌಧದಲ್ಲಿ ನಿಮ್ಮ ಧ್ವನಿಯಾಗಿ ನಿಂತು ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು.
ನಿಮ್ಮ ಅನುದಾನವನ್ನು ಸಮರ್ಪಕವಾಗಿ ಬಳಕೆ ತಮ್ಮ ಸಹಯೋಗದೊಂದಿಗೆ ಮಾಡುತ್ತೇನೆ ಎಂದು ಭರವಸೆ ನೀಡಿ, ತಾಲೂಕಿನಲ್ಲಿ ವಿಕಲ ಚೇತನರ ಸಮುದಾಯ ಭವನ ಹಾಗೂ ಗ್ರಂಥಾಲಯ, ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗಾಗಿ ಮೀಸಲಿರುವ 5% ಮೀಸಲಾತಿ ಕುರಿತು ಪ್ರಗತಿ ಪರಿಶೀಲನೆ ಮಾಡುವುದಾಗಿ ತಿಳಿಸಿದರು.
ಎಲ್ಲಾ ವಿಕಲಚೇತನರಿಗೆ ತಾವು ಹೋಗುವ ಯಾವುದೇ ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಮನವಿ ಮಾಡುವುದನ್ನು ಬಿಟ್ಟು ನಿಮ್ಮ ಹಕ್ಕು ಆಗಿರುವ ಕೆಲಸಗಳಿಗಾಗಿ ಆಗ್ರಹ ಮಾಡಿ ಎಂದು ಹೇಳಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.
ವಿಕಲ ಚೇತನರೊಂದಿಗೆ ಭೋಜನ ಮಾಡುತ್ತಾ ಅವರ ಕುಂದು ಕೊರತೆ ಆಲಿಸಿ, ಅವರಿಗೆ ಎಲ್ಲಾ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ವಿಕಲ ಚೇತನರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ಕಾರ್ಯಕ್ರಮದ ನಿರೂಪಣೆ ವಿರುಪಾಕ್ಷಪ್ಪಗೌಡ ಮಾಲಿಪಾಟೀಲ ಎಪಿಡಿ ತಾಲೂಕ ಸಂಯೋಜಕರು ನಿರ್ವಹಿಸಿದರು, ಕು.ಸಂಪ್ರೀತಾ ದೇವಪುತ್ರ, ನಾಗಪ್ಪ ಜಿ ಅವಂಟಿ, ರಮೇಶ್ ಮಾನೆ, ರಮೇಶ್ ಕಟ್ಟಿಮನಿ, ಹನಮಂತ, ಚಂದ್ರಪ್ಪ, ಹಣಮಂತ, ಮಂಗಮ್ಮ ಶ್ರೀದೇವಿ, ಶಿಲ್ಪಾ, ಗಂಗಪ್ಪ, ಎಂ.ರೇಷ್ಮಾ, ನಾಗಮಣಿ,ಗಂಗಪ್ಪ ಪಟ್ಟಣದ ಹಾಗೂ ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ನೂರಾರು ವಿಕಲ ಚೇತನರು ಸೇರಿದಂತೆ ರಾಜಕೀಯ ಮುಖಂಡರು ಇನ್ನಿತತರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















