ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರಾವಣ ಮಾಸದ ಪ್ರಯುಕ್ತ ವಿವಿಧ ಪೂಜೆ ಕಾರ್ಯಕ್ರಮ

ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಹುರುಳಿಕುಪ್ಪಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ಜುಲೈ 24 . ರಿಂದ ಆಗಸ್ಟ್ 23 ವರೆಗೆ ಪ್ರತಿದಿನ ಉದ್ಭವ ಮೂರ್ತಿಗೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಿಂದಗಿ ಶ್ರೀ ಶಾಂತವೀರ ಪಟ್ಟ ಅಧ್ಯಕ್ಷರ ಧಾರ್ಮಿಕ ಪಾಠಶಾಲೆ ಶಿಷ್ಯರಾದ ವೀರಯ್ಯ ಶಾಸ್ತ್ರಿ ಹಿರೇಮಠ ಅವರು ಗುರುವಾರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರಾವಣ ಮಾಸದ ಮೊದಲನೇ ದಿನದ ವರದಾ ನದಿಯಿಂದ ಸಕಲ ವಾದ್ಯ ವೈಭವಗಳಿಂದ ಗಂಗಾಜಲವನ್ನು ಗ್ರಾಮಕ್ಕೆ ತಂದು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ದೇವಸ್ಥಾನ ತಲುಪಿ ಶ್ರೀ ವೀರಭದ್ರೇಶ್ವರ ದೇವರಿಗೆ ಅರ್ಪಿಸಲಾಯಿತು. ದೇವರಿಗೆ ರುದ್ರಾಭಿಷೇಕ ಸಹಸ್ರ ಪುಷ್ಪಾರ್ಚನೆ, ವಿಶೇಷ ಪೂಜೆ, ಕಾರ್ಯಕ್ರಮ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ ಬಿ ಎಲಿಗಾರ್, ಎಂ.ವಿ.ಹೊಸಳ್ಳಿ ವಿ.ಕೆ ಕುಂದುಗೋಳ, ಬಸವರಾಜ್ ಮಡಿವಾಳ, ಬಸವರಾಜ್ ಇಂಗಳಗಿ, ಸಿದ್ದನಗೌಡ ಪಾಟೀಲ್, ಚನ್ನಬಸವಯ್ಯ ಹಿರೇಮಠ, ಈರಣ್ಣ ಎಲಿಗಾರ್, ಈರಣ್ಣ ತೆಂಬದಮನಿ, ವೀರಯ್ಯ ಸಂಕೀನ ಮಠ, ಈರಣ್ಣ ಬಡಿಗೇರ, ನಾಗರಾಜ್ ಮಡಿವಾಳ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!