ಹಾವೇರಿ ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ ಇಂದಿಗೂ ಮಳೆ ಬಿಡದೆ ಸುರಿಯುತ್ತಿದೆ.

ಮೈದುಂಬಿ ಹರಿಯುತ್ತಿರುವ ವರದಾನದಿ
ಸವಣೂರ ತಾಲೂಕ ಕುಣಿಮೆಳ್ಳಿಹಳ್ಳಿ ಗ್ರಾಮದ ಮೂಲಕ ಹಾಯ್ದು ಹೋಗಿರುವ ವರದಾ ನದಿಯು ಮೈದುಂಬಿ ಹರಿಯುತ್ತಿವೆ ಇದರಿಂದ ನದಿಯ ದಡದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಸಿದೆ.

ಜಲಾವೃತ ಬೆಳೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಾಲ ಸೂಲ ಮಾಡಿ ರೈತರು ಬಿತ್ತನೆ ಮಾಡಿದ್ದು ಇಂದಿಗೂ ಎಡೆಬಿಡದೆ ಮಳೆಯಿಂದ ಸಂಕಷ್ಟ ಪಡುವಂತಾಗಿದೆ.
ಮುಂಗಾರು ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಶೇಂಗಾ ಸೋಯಾಬೀನ್ ಸೇರಿದಂತೆ ಇನ್ನಿತರ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ ಸತತವಾಗಿ ಮಳೆ ಸುರಿಯುವ ಕಾರಣದಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬೆಳೆಗಿಂತ ಕಳೆಯು ಜಾಸ್ತಿಯಾಗಿ ರೈತರು ಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಕೆಲವು ದಿನಗಳ ಕಾಲ ಮಳೆ ಬಿಡುವು ನೀಡಿ ಬಿಸಿಲು ಬಿದ್ದರೆ ಬೆಳೆಗಳು ಸಮೃದ್ಧವಾಗಿ ಬೆಳೆಯಲು ಅನುಕೂಲವಾಗುತ್ತದೆ ಆದರೆ ಜಿಲ್ಲೆಯಲ್ಲಿ ಹೀಗೆ ಮುಂದುವರೆದರೆ ಭೂಮಿಯಲ್ಲಿ ತೇವಾಂಶ ಇನ್ನೂ ಹೆಚ್ಚಾಗಿ ಬೆಳೆಗಳ ಬೆಳವಣಿಗೆಗೆ ಕುಂಠಿತಗೊಂಡು ರೈತರು ನಷ್ಟ ಅನುಭವಿಸುವ ಸ್ಥಿತಿ ಉಂಟಾಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ರೈತರು ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ



















