ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಟಕಲ (ರೇವಗ್ಗಿ )ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಪುರಾಣ ಕಾರ್ಯಕ್ರಮ ಪ್ರಾರಂಭ

ಕಲಬುರಗಿ/ ಕಾಳಗಿ : ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ (ರಟಕಲ್ )ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರಾವಣ ಮಾಸ ಮತ್ತು ಜಾತ್ರಾ ನಿಮಿತ್ಯ ಪುರಾಣ ಮತ್ತು ಜಾತ್ರಾ ವಾಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವಿರುತ್ತದೆ.
ಯಾದಗಿರಿ ಜಿಲ್ಲೆಯ ಅಬ್ಬೆ ತುಮಕೂರಿನ ಪವಾಡ ಪುರುಷರಾಗಿದ್ದ. (ವಿಶ್ವಗಂಗಾ ವಿಶ್ವಜ್ಯೋತಿ ) ಶ್ರೀ ವಿಶ್ವರಾಧ್ಯ ಅಪಂಗಗಳ ಒಂದು ತಿಂಗಳ ಪರಿಯಂತ (35ದಿನ) ಪುರಾಣ ಕಾರ್ಯಕ್ರಮವು 24/07/2025 ರಂದು ಅಮಾವಾಸ್ಯೆ ಗುರುವಾರ ರಾತ್ರಿ 8:30 ನಿಮಿಷಕ್ಕೆ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಾರಂಭವಾಗುತ್ತದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಪರಮ ಪೂಜ್ಯ ಶ. ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯರು ಶ್ರೀ ರೇವಣಸಿದ್ದೇಶ್ವರ ಹಿರೇಮಠ (ನಡುವಿನ ಮಠ) ರಟಕಲ್ ವಹಿಸಿಕೊಳ್ಳುವರು.
ಈ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿಯಾದ ಪೂಜ್ಯ ಶ್ರೀ ನೀಲಕಂಠ ದೇವರು ವಹಿಸಿಕೊಳ್ಳುವವರು. ಈ ಕಾರ್ಯಕ್ರಮದ ಪುರಾಣಿಕರು ಶ್ರೀ ವೇದಮೂರ್ತಿಮಹಾಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಪಡಗದಹಳ್ಳಿ, ಸಂಗೀತ ಸೇವೆ ಶ್ರೀ ವೇದಮೂರ್ತಿ ಮಹದೇವಯ್ಯ ಸ್ವಾಮಿಯಮ್ ಪಳ್ಳಿ, ತಬಲಾ ಸೇವೆ ಶ್ರೀ ವೇದಮೂರ್ತಿ ಶಿವಕುಮಾರ್ ಸ್ವಾಮಿ ಉಡಮನಹಳ್ಳಿ ಸೇವೆ ಸಲ್ಲಿಸುವವರು. ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅರ್ಚಕರು ಶ್ರೀ ಚನ್ನಬಸಪ್ಪ ದೇವರಮನಿ, ರೇವಣಸಿದ್ದೇಶ್ವರ ಚಾಜ್ ದಾರಿಗಳಾದ ಶ್ರೀ ರುದ್ರಶೆಟ್ಟಿ ಧರಿ ಗುರುಮಿಟ್ಕಲ್, ಏಳುಊರಿನ ಚಾದಾರಿಗಳು, ದೇವಸ್ಥಾನದ ಕಾರ್ಯದರ್ಶಿಗಳಾದ ಸದಾಶಿವ ವಗ್ಗೆ ಮತ್ತು ಸುತ್ತ ಮುತ್ತಿನ ಸರ್ವ ಗ್ರಾಮಸ್ಥರು ಈ ಜಾತ್ರೆಯ ವಿಶೇಷ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗುವವರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವೀರಣ್ಣ ಗಂಗಾಣಿ ರಟಕಲ್ ವಹಿಸಿಕೊಳ್ಳುವರು.
ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಕಲಬುರ್ಗಿ ರವರು ಆತ್ಮೀಯವಾಗಿ ಎಲ್ಲಾ ಭಕ್ತಾದಿಗಳಿಗೆ ಸ್ವಾಗತ ಕೋರಿರುತ್ತಾರೆ.

ವರದಿ ಚಂದ್ರಶೇಖರ ಆರ್ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!