ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಬಿ.ಎಲ್.ಒ ಗಳಿಗೆ ತರಬೇತಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಪ್ಪ ಅವರು ಮಾತನಾಡಿ ಅವರು ತಮ್ಮ ಅನುಭವಗಳನ್ನು ಹೇಳುತ್ತಾ ಕೊಟ್ಟಂತ ಕೆಲಸವೂ ಅನುಭವ ದಕ್ಷತೆಯನ್ನು ತಿಳಿಸುತ್ತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕರು ಹಾಗೂ ಶಾಲೆಯ ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಸಮಯಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಿ ಎಂದು ಹೇಳುತ್ತಾ ತಮ್ಮ ಅನುಭವ ಅನಿಸಿಕೆಗಳನ್ನು ಹಂಚಿಕೊಂಡು ಮಾರ್ಗದರ್ಶನ ನೀಡಿದರು. ಚುನಾವಣಾ ಸಂಪನ್ಮೂಲ ಅಧಿಕಾರಿಗಳಾದ ಮೆಣಸಗಿ ಅವರು BLO ಗಳಿಗೆ ತರಬೇತಿ, ಮಾರ್ಗದರ್ಶನ ನೀಡಿದರು.
ನಮೂನೆ ಆರು, ಏಳು, ಎಂಟು ಸೇರ್ಪಡೆ ತಿದ್ದುಪಡಿ, ಹೊರ ರಾಜ್ಯದ, ಸ್ಥಳಾಂತರ, ಕಾಲ್ಪನಿಕ ಸಂಖ್ಯೆ ಮುಂತಾದ ವಿಚಾರಗಳನ್ನು ಮನೆ ಮನೆ ಸರ್ವೆ ಬೂತ್ ಜಾಗೃತಿ ಗುಂಪು ಹಾಗೂ ಮತದಾರರ ಅರ್ಹತೆಗಳು ಮುಂತಾದ ವಿಚಾರಗಳನ್ನು BLO ಗಳಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳು ಮಂಜುನಾಥ ಮತ್ತು ಶಿರಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೃಷ್ಣಪ್ಪ, ಸಹಾಯಕ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಚೌಡಪ್ಪ, ನಗರಸಭೆಯ ಆಯುಕ್ತರು ರುದ್ರೇಶ್, ಶಿರಾ ತಾಲೂಕಿನ ಅನೇಕ ಅಧಿಕಾರಿಗಳು ಹಾಗೂ BLO ಮೇಲ್ವಿಚಾರಕರು ಮುಂತಾದವರು ಹಾಜರಿದ್ದರು.
ವರದಿ ಕೊಟ್ಟ ಕರಿಯಣ್ಣ



















