ಬೆಂಗಳೂರು :ವಿಶೇಷ ಚೇತನರು -ಯುವಕರು ಮಹಿಳೆಯರ ಆರ್ಥಿಕ-ಸಾಮಾಜಿಕ ಸಬಲೀಕರಣಕ್ಕೆ ಸಂಬಂಧ ಪಟ್ಟಂತೆ ಕಳೆದ 7 ವರ್ಷಗಳಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಭಗತ್ ಸಿಂಗ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣಯ್ಯ. ಎ. ಇವರಿಗೆ ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೈತನ್ಯ ಇಂಟರ್ ನ್ಯಾಷನಲ್ ಕಲಾ ಅಕಾಡೆಮಿ ವತಿಯಿಂದ ಭಗತ್ ಸಿಂಗ್ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಿರಿಯ ಸಮಾಜ ಸೇವಕ ನೀಲಕಂಠ ಅಡಿಗ, ಸಮಾಜಸೇವಕಿ ಡಾ. ಸೌಜನ್ಯ ಶರತ್ ಚಂದ್ರ, ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್, ಡಾ. ವಸುಧಾ ಶ್ರೀನಿವಾಸ್, ಹಾಸನದ ಸಮಾಜಸೇವಕ ಎಂ. ಸಿ. ರಾಜು ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- ಕರುನಾಡ ಕಂದ



















