ಶ್ರೀಮತಿ ಪಲ್ಲವಿ ಜಿ. ಮತ್ತು ಶ್ರೀಮತಿ ಪ್ರಭಾವತಿ ರವರ ಮೇಲಿನ ಹಲ್ಲೆ ಖಂಡನೀಯ, ಆರೋಪಿಗಳನ್ನು ಬಂಧಿಸಿ – ಆನಂದ ಭಜಂತ್ರಿ.
ಯಾದಗಿರಿ: ಬೆಂಗಳೂರಿನ ಗಾಂಧಿ ಭವನದಲ್ಲಿ ದಿನಾಂಕ: 05/07/2025 ರಂದು ನಡೆದ ಸಭೆಯಲ್ಲಿ ಉದ್ದೇಶ ಪೂರ್ವಕವಾಗಿ ಒಳ ಮೀಸಲಾತಿ ವಿಚಾರವಾಗಿ ಹೆಚ್.ಆಂಜನೇಯ ಸೇರಿದಂತೆ ಲೋಹಿತಾಶ್ವ, ವೀರೇಶ, ಶಿವ, ಲೋಕೇಶ, ಶಾಂತಕುಮಾರ, ಬಸವರಾಜ ಮತ್ತು ಸುಭಾಶ್ ಚವ್ಹಾಣ ಮತ್ತು ಕೆಲವು ದಲ್ಲಾಳಿಗಳು ಸೇರಿ ಶ್ರೀಮತಿ ಪಲ್ಲವಿ ಜಿ. ಮಾನ್ಯ ಅಧ್ಯಕ್ಷರು, ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಹಲ್ಲೆ ಮಾಡಿದ್ದು ಮತ್ತು ಒಬ್ಬ ಸರ್ಕಾರದ ಪ್ರತಿನಿಧಿಯ ರಕ್ಷಣೆಗೆ ಧಾವಿಸಿದ ಅಲೆಮಾರಿ ಕೊರಮ ಜನಾಂಗದ ಜಿಲ್ಲಾಧ್ಯಕ್ಷೆ ಶ್ರೀಮತಿ ಪ್ರಭಾವತಿರವರಿಗೂ ರಕ್ತ ಬರುವಂತೆ ಮೈ ಕೈ ಪರಚಿ ಗೂಂಡಾ ವರ್ತನೆ ಮಾಡಿರುವದನ್ನು ಖಂಡಿಸಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಇಂದು ಮನವಿ ಮೂಲಕ ಈ ಕೆಳಕಂಡ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.
- ಹೆಣ್ಣು ಮಕ್ಕಳನ್ನು ಅಗೌರವಿಸಿದ ಹೆಚ್.ಆಂಜನೇಯರವರ ವಿರುದ್ಧ ಪ್ರಕರಣ ದಾಖಲಿಸಿ, ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಳಿಸಲು ಕ್ರಮ ವಹಿಸುವುದು.
- ಸರ್ಕಾರ ಮತ್ತು ನಿಗಮಕ್ಕೆ ಕೆಟ್ಟ ಹೆಸರು ತರಲು ಹುನ್ನಾರ ನಡೆಸಿರುವ ದಲ್ಲಾಳಿಗಳು, ಶ್ರೀಮತಿ ಪಲ್ಲವಿ ಜಿ. ಮಾನ್ಯ ಅಧ್ಯಕ್ಷರು, ಕರ್ನಾಟಕ ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.
- ಎಸ್.ಸಿ/ಎಸ್.ಟಿ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಒಳಪಟ್ಟ 51 ಪ. ಜಾತಿಯಲ್ಲಿ ಬರುವ ಕೊರಮ, ಕೊರಚ ಸಮುದಾಯದವರನ್ನು ಹೊರಗಿಡುವ ಹುನ್ನಾರ ನಡೆದಿದ್ದು, ಯಾವುದೇ ಕಾರಣಕ್ಕೂ ಈ ಸಮುದಾಯದವರನ್ನು ಹೊರಗಿಡಬಾರದು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ರಿ.)ಕೊರಮ-ಕೊರಚ-ಕೊರವ ಸಮುದಾಯಗಳ ಒಕ್ಕೂಟದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಪದಾಧಿಕಾರಿಗಳಾದ ಶಿವಪ್ಪ ಭಜಂತ್ರಿ, ಭೀಮರಾಯ ರಂಗಂಪೇಠ, ಬಸವರಾಜ ಭಜಂತ್ರಿ ಗಂಗನಾಳ, ಆಂಜನೇಯ ಭಜಂತ್ರಿ ಮಸ್ಕನಳ್ಳಿ, ಖಂಡಪ್ಪ ಭಜಂತ್ರಿ ಹಣಮಂತ ಭಜಂತ್ರಿ, ಹಣಮಂತ ಭಂಜತ್ರಿ , ಶರಣಪ್ಪ ಭಜಂತ್ರಿ ,ಹಣಮಂತ ಭಜಂತ್ರಿ, ಬಸವರಾಜ ಭಜಂತ್ರಿ ಶಿವಪುರ,ಆನಂದ ಭಜಂತ್ರಿ ಗೋಪಳಾಪುರ,ಸಾಬಣ್ಣ ಭಜಂತ್ರಿ, ಸಂತೋಷ ಭಜಂತ್ರಿ, ರಮೇಶ ಭಜಂತ್ರಿ ಗೋಗಿ, ಗಂಗಪ್ಪ ಭಜಂತ್ರಿ, ಬಸವರಾಜ ಚಟ್ನಳ್ಳಿ,ಶಂಕರ್ ಭಜಂತ್ರಿ ಹೊಸಕೇರಾ,ಆಶಪ್ಪ ಭಜಂತ್ರಿ
ಕಾಶಪ್ಪ ಭಜಂತ್ರಿ, ಸಿದ್ದು ಭಜಂತ್ರಿ ,ಭೀಮರಾಯ ಭಜಂತ್ರಿ,ದೇವಪ್ಪ ಭಜಂತ್ರಿ ,ಹುಸೇನಿ ಭಜಂತ್ರಿ ,ಶೇಖಪ್ಪ ಭಜಂತ್ರಿ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















