ಸಮಸ್ಯೆಗಳ ಸುಳಿಯಲ್ಲಿ ಸಾರ್ವಜನಿಕರು
ವಿಜಯಪುರ ಜಿಲ್ಲೆಯ ಇಂಡಿಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ದೂರ ದೂರದ ಊರುಗಳಿಂದ ಬಂದ ಸಾರ್ವಜನಿಕರಿಗೆ ಸರಿಯಾದ ನೀರಿನ ಹಾಗೂ ಸರಿಯಾದ ಕ್ಯಾಂಟೀನ್ ವ್ಯವಸ್ಥೆ ಕೂಡಾ ಇರುವುದಿಲ್ಲ ಡಾಕ್ಟರ್ಸ್ ಗಳಿಗೆ ಸರಿಯಾದ ನಿಗದಿತ ಸಮಯವೂ ಇಲ್ಲ
ಹೀಗಾಗಿ ಸಾರ್ವಜನಿಕರಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಸರ್ಕಾರಿ ಆಸ್ಪತ್ರೆಗಳು ಪ್ರಮುಖ ಪಾತ್ರವಹಿಸುತ್ತವೆ ಆದರೆ ಇಂಡಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೂಡ ಮಾಡಿರುವುದಿಲ್ಲ ಎಮರ್ಜೆನ್ಸಿಗೋಸ್ಕರ ಅಂಬುಲೆನ್ಸ್ ಕೂಡ ಒಂದರಿಂದ ಎರಡು ಅಷ್ಟೇ ಇರುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತುಂಬಾ ತೊಂದರೆ ಉಂಟಾಗಿದೆ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಾಗಲಿ ಹಾಗೂ ತಾಲೂಕಾ ಸಾರ್ವಜನಿಕ ಮುಖ್ಯ ಅಧಿಕಾರಿಯಾಗಲೀ ಇದನ್ನು ಪರಿಶೀಲನೆ ಮಾಡಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕಾಗಿ ಇಂಡಿ ತಾಲೂಕಿನ ಸಾರ್ವಜನಿಕರ ಆಕ್ರೋಶವಾಗಿದೆ.
ವರದಿ. ಅರವಿಂದ ಕಾಂಬಳೆ



















