ಕಲಬುರಗಿ/ ಕಾಳಗಿ :ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ (ರಟಕಲ್ ) ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರಾವಣ ಮಾಸ ಮತ್ತು ಜಾತ್ರಾ ನಿಮಿತ್ಯ ಪುರಾಣ ಹಮ್ಮಿಕೊಳ್ಳಲಾಗಿದ್ದು ಜಾತ್ರೆಯ ವಾಲ್ ಪೋಸ್ಟ್ ಬಿಡುಗಡೆ ಮಾಡಲಾಯಿತು.
ಈ ಪುರಾಣ ಕಾರ್ಯಕ್ರಮವನ್ನು ಶ್ರೀ ಷ. ಬ್ರ. ಪೂಜ್ಯ ರೇವಣಸಿದ್ದ ಶಿವಾಚಾರ್ಯರು ರಟಕಲ್ ಉದ್ಘಾಟಿಸಿ ದಿವ್ಯ ಸಾನಿಧ್ಯವನ್ನು ವಹಿಸಿದರು ಮತ್ತು ಶ್ರೀ ನೀಲಕಂಠ ಮರಿದೇವರು ರಟಕಲ್ ಪೂಜ್ಯರು ಈ ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನವನ್ನು ವಹಿಸಿದರು.
ಪವಾಡ ಪುರುಷರಾಗಿದ್ದ (ವಿಶ್ವಗಂಗಾ ವಿಶ್ವಜ್ಯೋತಿ ) ಶ್ರೀ ವಿಶ್ವಾರಾಧ್ಯ ಅಪಂಗಗಳ ಒಂದು ತಿಂಗಳ ಪರಿಯಂತ ಪುರಾಣ ಕಾರ್ಯಕ್ರಮವು ದಿ. 24/07/2025 ರಿಂದ ದಿ. 29 -08-2025 ರವರೆಗೆ ಪುರಾಣ ಕಾರ್ಯಕ್ರಮ ನಡೆಯುತ್ತದೆ. ದಿ. 24-07-2025 ರಂದು ಅಮಾವಾಸ್ಯೆ ಗುರುವಾರ ರಾತ್ರಿ 8:30 ನಿಮಿಷಕ್ಕೆ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮೊದಲ ದಿನದ ಪುರಾಣ ಕಾರ್ಯಕ್ರಮವು ಪ್ರಾರಂಭ ಮಾಡಲಾಗಿದೆ.
ಈ ಪುರಾಣ ಕಾರ್ಯಕ್ರಮಗಳಿಂದ ಈ ಮಾನವ ಜನ್ಮ ತನ್ನ ಪವಿತ್ರತೆಯನ್ನು ಹೆಚ್ಚಿಸಿಕೊಳ್ಳಬೇಕು ಮತ್ತು ಶ್ರೀ ವಿಶ್ವಾರಾಧ್ಯರ ಜೀವನ ಚರಿತ್ರೆಯನ್ನು ಕೇಳಿ,ಅವರ ಪವಾಡಗಳನ್ನು ತಿಳಿದುಕೊಂಡು, ಅವರ ಜೀವನದಲ್ಲಿ ಪಟ್ಟಂತ ಕಷ್ಟ ನೋವುಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಕೆಲವೊಂದಿಷ್ಟು ಅಳವಡಿಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಧರ್ಮ, ಆಚಾರ ಸಂಪ್ರದಾಯ ಎಲ್ಲವನ್ನು ಬಿಟ್ಟಿದ್ದೇವೆ. ಏಕೆಂದರೆ ನಮ್ಮ ದೇಹದಲ್ಲಿ ಕೆಟ್ಟ,ಕೆಟ್ಟ ಆಲೋಚನೆಯನ್ನು ತುಂಬುತ್ತಾ ಇದ್ದೇವೆ. ಅದಕ್ಕೆ ಪುರಾಣ ಸಂತರ, ಪುಣ್ಯ ಕಥೆ, ಮಹಾತ್ಮರ ಅನುಭವ ವಾಣಿಗಳನ್ನು ನಮ್ಮ ದೇಹದಲ್ಲಿ ತುಂಬಿದಾಗ ಮಾತ್ರ ನಮ್ಮ ಬದುಕಿಗೆ ಅರ್ಥ ಸಿಗುತ್ತದೆ ಎಂದು ಪರಮ ಪೂಜ್ಯ ಶ್ರೀ ಷ. ಬ್ರ. ರೇವಣಸಿದ್ಧ ಶಿವಾಚಾರ್ಯರು ರೇವಣಸಿದ್ದೇಶ್ವರ ಹಿರೇಮಠ ರಟಕಲ್ ಶ್ರೀಗಳು ಈ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ತಮ್ಮ ಅನುಭವದ ಮಾತುಗಳನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ಭಕ್ತರು ದರ್ಶನ ಪಡೆದು ಮನಸ್ಸು ಶಾಂತತೆಯನ್ನು ಮಾಡಿಕೊಂಡು ಹೋಗುವಾಗ ಬುದ್ಧಿಯನ್ನು ತಂಪು ಮಾಡಿಕೊಂಡು ಹೋಗುತ್ತೀರಿ ಮತ್ತು ಕಾಯಕ, ಪೂಜೆ, ಅಕ್ಷರ ದಾಸೋಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಾ ಬಂದಿದೆ. ಒಂದು ಕಾರ್ಯಕ್ರಮ ನಡೆಯಬೇಕಾದರೆ ಹಲವಾರು ಭಕ್ತಾದಿಗಳ ಶ್ರಮವಿರುತ್ತದೆ ಎಂದು ಪೂಜ್ಯರು ನೀಲಕಂಠ ದೇವರು ರಟಕಲ್ ಗ್ರಾಮದ ವಿರಕ್ತ ಮಠದ ಶ್ರೀಗಳು ಮಾತನಾಡಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಪರಮ ಪೂಜ್ಯ ಷ. ಬ್ರ. ಶ್ರೀ ರೇವಣಸಿದ್ಧ ಶಿವಾಚಾರ್ಯರು ಶ್ರೀ ರೇವಣಸಿದ್ದೇಶ್ವರ ಹಿರೇಮಠ (ನಡುವಿನ ಮಠ) ರಟಕಲ್ ವಹಿಸಿಕೊಳ್ಳಲಾಗಿದೆ.
ಈ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿಯಾದ ಪೂಜ್ಯ ಶ್ರೀ ನೀಲಕಂಠ ದೇವರು ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ಪುರಾಣಿಕರಾದ ವೇದಮೂರ್ತಿ ಶ್ರೀ ಮಹಾಲಿಂಗಯ್ಯ ಶಾಸ್ತ್ರಿಗಳು ಹಿರೇಮಠ ಪಡಗದಹಳ್ಳಿ, ಸಂಗೀತ ಸೇವೆ ಶ್ರೀ ವೇದಮೂರ್ತಿ ಮಹದೇವಯ್ಯ ಸ್ವಾಮಿ ಯಮ್ ಪಳ್ಳಿ, ತಬಲ ಸೇವೆ ಶ್ರೀ ವೇದಮೂರ್ತಿ ಶಿವಕುಮಾರ್ ಸ್ವಾಮಿ ಉಡಮನಹಳ್ಳಿ ಸೇವೆಯು 35 ದಿನಗಳು ವರೆಗೆ ಸಲ್ಲಿಸುವವರು.
ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಶ್ರೀ ಚನ್ನಬಸಪ್ಪ ದೇವರಮನಿ, ರೇವಣಸಿದ್ದೇಶ್ವರ ಚಾಜ್ ದಾರಿಗಳಾದ ಶ್ರೀ ರುದ್ರಶೆಟ್ಟಿ ಧರಿ ಗುರುಮಿಟ್ಕಲ್, ಏಳು ಊರಿನ ಚಾದಾರಿಗಳು, ದೇವಸ್ಥಾನದ ಕಾರ್ಯದರ್ಶಿಗಳಾದ ಸದಾಶಿವ ವಗ್ಗೆ ಮತ್ತು ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಹಾಗೂ ಆಡಳಿತಾಧಿಕಾರಿಗಳು ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ, ರಟಕಲ್ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಸಮಸ್ತ ಸದ್ಭಕ್ತ ಮಂಡಳಿ ರೇವಗ್ಗಿ, ರಟಕಲ್, ಗೊಣಗಿ, ಮುಕ್ರಂಬಿ, ಬೆಡಸುರ, ಮಾವಿನಸುರ, ಕಂದಗೂಳ ಮತ್ತು ದೂರದ ಗ್ರಾಮದಿಂದ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.
ಅಚ್ಚುಕಟ್ಟಾಗಿ ಜನಗಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಶಿಸ್ತು ಬದ್ಧವಾಗಿ ಪೊಲೀಸ್ ಬಂದ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮವನ್ನುವನ್ನು ವೀರಣ್ಣ ಗಂಗಾಣಿರವರು ನಿರೂಪಿಸಿದರು.
ವರದಿ ಚಂದ್ರಶೇಖರ ಅರ್ ಪಾಟೀಲ್




















