ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಂಗಾವತಿ ದರೋಜಿ ಮಧ್ಯೆ ನಾಲ್ಕು ಸ್ಟೇಷನ್‌ಗಳ ಪಟ್ಟಿ ವೈರಲ್

ಬಳ್ಳಾರಿ/ ಕಂಪ್ಲಿ: ಗಂಗಾವತಿಯಿಂದ ಕಂಪ್ಲಿ ಮೂಲಕ ದರೋಜಿಗೆ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕಕ್ಕಾಗಿ ಸಮೀಕ್ಷೆ ಮುಗಿದಿದ್ದು, ಇದೀಗ ರೈಲ್ವೆ ಸ್ಟೇಷನ್ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ ಒಟ್ಟಾರೆ ಆರು ಸ್ಟೇಷನ್‌ಗಳ ಮಾಹಿತಿ ಇದೆ.
ಗಂಗಾವತಿ ರೈಲ್ವೆ ನಿಲ್ದಾಣದಿಂದ ಕಂಪ್ಲಿ ಮೂಲಕ ದರೋಜಿ ರೈಲ್ವೆ ನಿಲ್ದಾಣಕ್ಕೆ ಒಟ್ಟು 31.30 ಕಿ.ಮೀ. ಗಳಷ್ಟಿದ್ದು ಮಧ್ಯದಲ್ಲಿ ಒಟ್ಟಾರೆ ನಾಲ್ಕು ಸ್ಟೇಷನ್‌ಗಳು ಬರುತ್ತವೆ. ಗಂಗಾವತಿಯಿಂದ 10.77 ಕಿ.ಮೀ. ಅಂತರದಲ್ಲಿ ಕಂಪ್ಲಿಯಲ್ಲಿ, ಇಲ್ಲಿಂದ 3.22ಕಿ.ಮೀ. ಅಂತರ ದೇವಸಮುದ್ರದಲ್ಲಿ ಹಾಲ್ಟ್, 4.70ಕಿ.ಮೀ. ಅಂತರದ ಜವುಕಿನಲ್ಲಿ ಸ್ಟೇಷನ್, 5ಕಿ.ಮೀ. ಅಂತರದಲ್ಲಿ ಸುಗ್ಗೇನಹಳ್ಳಿಯಲ್ಲಿ ಹಾಲ್ಟ್, ಅಲ್ಲಿಂದ 7.60ಕಿ.ಮೀ.ಅಂತರದ ದರೋಜಿಗೆ ಸಂಪರ್ಕ ಸೇರುತ್ತದೆ.
ಈಗಾಗಲೇ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕ ಕಾಮಗಾರಿಗಾಗಿ ಸಮೀಕ್ಷೆ ಪೂರ್ಣಗೊಂಡಿದ್ದು, 919.49 ಕೋಟಿ ರೂಪಾಯಿಗಳನ್ನು ಅಂದಾಜಿಸಿದೆ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸುವಂತೆ ಈಗಾಗಲೇ ಹಲವು ಬಾರಿ ನಿಯೋಗ ಮೂಲಕ ತೆರಳಿ ರೈಲ್ವೆ ಸಚಿವ ವಿ. ಸೋಮಣ್ಣ ಸೇರಿ ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ, ಶಾಸಕ, ಸಂಸದರಿಗೆ ಮನವಿ ಸಲ್ಲಿಸಿದೆ. ರೈಲ್ವೆಕಾಮಗಾರಿ ಆರಂಭಕ್ಕೆ ಅನುದಾನ ಬಿಡುಗಡೆಗೊಳ್ಳಬೇಕಿದೆ ಎಂದು ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಒತ್ತಾಯಿಸಿದ್ದಾರೆ.

ಕಂಪ್ಲಿ ಮೂಲಕ ಗಂಗಾವತಿ-ದರೋಜಿ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕ ಸಮೀಕ್ಷೆಯಲ್ಲಿ 10ಕ್ಕೆ 6.50 ಅಂಕಗಳಿಸಿ ಲಾಭದಾಯಕವಾಗಿದೆ. ರಾಸಾಯನಿಕ, ಸಿಮೆಂಟ್, ಸ್ಟೀಲ್, ಭತ್ತ, ಕಚ್ಚಾವಸ್ತು ಸೇರಿ ನಾನಾ ಸರಕುಗಳ ಸಾಗಣೆಗೆ ಅನುಕೂಲವಾಗಲಿದೆ. ಗಂಗಾವತಿ-ದರೋಜಿ ರೈಲ್ವೆ ಸಂಪರ್ಕ ಕಾಮಗಾರಿಗೆ ಉಭಯ ಸರ್ಕಾರಗಳು ಅನುದಾನ ಬಿಡುಗಡೆಗೊಳಿಸಬೇಕೆಂದು ಹುಬ್ಬಳ್ಳಿ ವಿಭಾಗದ ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಗಂಗಾವತಿಯ ಅಶೋಕಸ್ವಾಮಿ ಹೇರೂರು ಒತ್ತಾಯಿಸಿದರು.

ಟಿಪ್ಪಣಿ:
Xing ಎಂದರೆ ಸ್ಟೇಷನ್ ಮಾಸ್ಟರ್, ಸಿಬ್ಬಂದಿ, ಲೂಪ್ ಲಿನ್‌ಗಳು, ಕಂಟ್ರೋಲಿಂಗ್ ಸಿಗ್ನಲ್‌ಗಳು.
Halt ಎಂದರೆ ಕೇವಲ ಯಾವುದೇ ಸ್ಟೇಷನ್ ಮಾಸ್ಟರ್ ಮತ್ತು ಸಿಬ್ಬಂದಿ ಇಲ್ಲ, ಟಿಕೆಟ್ ಕೌಂಟರ್‌ಗೆ ಒಬ್ಬ ವ್ಯಕ್ತಿ ಇರುತ್ತಾನೆ, ಸಿಗ್ನಲ್ ನಿಯಂತ್ರಣವಿಲ್ಲ.
ಉದಾಹರಣೆಗೆ ಬಳ್ಳಾರಿ ಕಂಟೋನ್ಮೆಂಟ್ ಹಾಲ್ಟ್ ಸ್ಟೇಷನ್.

ವರದಿ : ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!