ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳಿಗೆ ಸಂಸ್ಕೃತ, ವೈದಿಕ, ಜ್ಯೋತಿಷ್ಯದ ಜೊತೆಗೆ ಸಂಗೀತ, ವಚನ ಸಾಹಿತ್ಯವನ್ನು ಬೋಧಿಸಿ

ಬಳ್ಳಾರಿ/ ಕಂಪ್ಲಿ : ಸಂಗತ್ರಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಸ್ಕೃತ, ವೈದಿಕ, ಜ್ಯೋತಿಷ್ಯ ಜೊತೆಗೆ ಸಂಗೀತ ಹಾಗೂ ವಚನ ಸಾಹಿತ್ಯವನ್ನು ಬೋಧಿಸುವಲ್ಲಿ ಮುಂದಾಗಬೇಕು ಎಂದು ವೀರಶೈವ ಸಮಾಜದ ಮುಖಂಡ ಹೇಮಯ್ಯಸ್ವಾಮಿ ತಿಳಿಸಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳಕಾಲ ಆಯೋಜಿಸಿರುವ ಶ್ರಾವಣ ಮಾಸದ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ರಾಜ್ಯದಲ್ಲಿಯೇ ಖ್ಯಾತಿಯನ್ನು ಗಳಿಸಿರುವ ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಾಡಿನ ವಿವಿಧ ಭಾಗದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಆಗಮಿಸುತ್ತಿದ್ದು, ಅವರಿಗೆ ಜೋತ್ಯಿಷ್ಯದ ಜೊತೆಗೆ ಸಂಗೀತ,ವಚನ ಹಾಗೂ ಆರ್ಯುವೇದದ ಬಗ್ಗೆ ತಿಳಿದಿದ್ದರೆ ಜೀವನದಲ್ಲಿ ಮುಂದೆ ಬರುತ್ತಾರೆ ಆದ್ದರಿಂದ ಪಾಠಶಾಲೆಯಲ್ಲಿ ಸಂಗೀತ ಮತ್ತು ವಚನ ಸಾಹಿತ್ಯ ಬೊಧನೆ ವ್ಯವಸ್ಥೆ ಮಾಡಿದರೆ ಅದರೆ ಸಂಪೂರ್ಣ ಖರ್ಚು ವೆಚ್ಚಗಳನ್ನು ಭರಿಸುವುದಾಗಿ ಭರವಸೆಯನ್ನು ನೀಡಿದರು.
ಪಾಠಶಾಲೆಯ ವಿಶ್ರಾಂತ ಪ್ರಾಚಾರ್ಯರಾದ ಎಂ.ಎಸ್.ಶಶೀಧರ ಶಾಸ್ತ್ರಿ, ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ, ಡಾ. ಜಗನ್ನಾಥ ಹಿರೇಮಠ ಮಾತನಾಡಿ ಅಷ್ಠಾಚಾರ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಬಗ್ಗೆ ನಮ್ಮ ಮಕ್ಕಳಿಗೆ ಆರಂಭದಿಂದಲೇ ಕಲಿಸುವ ಮೂಲಕ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕಾಗಿದೆ ಎಂದರು.
ಬುಕ್ಕಸಾಗರ ಕರಿಸಿದ್ದೇಶ್ವರ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಆರ್ಶೀವಚನ ನೀಡಿ ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದು, ಈ ಸಮಯದಲ್ಲಿ ದಣಿದಿರುವ ಮನಸ್ಸಿಗೆ ಶಾಂತಿ ನೆಮ್ಮದಿಗಾಗಿ ಒಂದು ತಿಂಗಳ ಕಾಲ ಉತ್ತಮವಾದ ಆಧ್ಯಾತ್ಮಿಕ ವಿಚಾರಗಳನ್ನು ಆಲಿಸಲಿ ಎಂದು ವಿವಿಧ ಆಚರಣೆಗಳನ್ನು ಅಳವಡಿಸಿಕೊಂಡಿದ್ದಾರೆಂದು ತಿಳಿಸಿದರು.
ಶ್ರಾವಣಮಾಸದ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6-3೦ಕ್ಕೆ ಮಹಾಮಹಿಮ ಪವಾಡ ಪುರುಷ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ ನಡೆಯಲಿದ್ದು ಪ್ರತಿದಿನ ನಾಡಿನ ವಿವಿಧ ಮಠಗಳ ಶಿವಾಚಾರ್ಯಗಳು, ಸ್ವಾಮೀಜಿಗಳು ಆಗಮಿಸಿ ಆರ್ಶೀವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಠಶಾಲೆಯ ಪದಾಧಿಕಾರಿಗಳಾದ ಇಟಗಿ ಬಸವರಾಜಗೌಡ, ಅಲಬನೂರು ಬಸವರಾಜ, ಗಂಡಿ ಗಣೇಶ್, ಟಿ. ಸುರೇಶಗೌಡ, ಅರವಿ ಅಮರೇಶಗೌಡ, ಡಾ. ಜಗನ್ನಾಥ, ಗೌಳೇರು ಶೇಖರಪ್ಪ, ಅಳ್ಳಿ ನಾಗರಾಜ, ಕೋರಿ ಶೆಟ್ರು ಸಣ್ಣ ಶಿವುಶರಣ, ಹುಲಿಹೈದರ ಅಮರೇಶ್, ಎಂ. ವಿಜಯಕುಮಾರ್, ಕುಕನೂರು ಅಶೋಕ, ಸಜ್ಜನರ ಶರಣಪ್ಪ, ನಿವೃತ್ತ ಪ್ರಚಾರ್ಯಾರಾದ ಎಂ.ಎಸ್.ಶಶೀಧರ ಶಾಸ್ತ್ರಿಗಳು, ಪ್ರಾಚಾರ್ಯ ಘನಮಠದಯ್ಯ ಶಾಸ್ತ್ರಿ, ವೀರಶೈವ ಸಮಾಜದ ಮುಖಂಡರಾದ ಅರವಿ ಬಸವನಗೌಡ, ಡಿ.ವೀರಪ್ಪ, ಕಲ್ಗುಡಿ ವಿಶ್ವನಾಥ್, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಯಲಿಗಾರ ವೆಂಕಟರೆಡ್ಡಿ, ವೀರಶೈವ ಸಂಘದ ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!