ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೋರುತಿರುವ ಬಾದಾಮಿ ತಹಶೀಲ್ದಾರ್ ಕಛೇರಿ

ಬಾಗಲಕೋಟೆ/ ಬಾದಾಮಿ:
ಸಂತ ಶಿಶುನಾಳ ಶರೀಫರ ಸೋರುತಿಹುದು ಮನೆಯ ಮಾಳಿಗೆ ಎನ್ನುವಂತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಾ ದಂಡಾಧಿಕಾರಿಯವರ ಕಛೇರಿ ಸೋರುತಿಹುದು ಎನ್ನುವ ಹಾಡಿಗೆ ಹೊಂದುವಂತಿದೆ.. ಬಾದಾಮಿ ತಾಲೂಕಾ ದಂಡಾಧಿಕಾರಿಗಳ ಕಛೇರಿ ತಹಶೀಲ್ದಾರ್ ಆಫೀಸ್ ಮಳೆಯಿಂದ ಸೋರುತ್ತಿದೆ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕೆಳಗಡೆ ಹಾಗೂ ಟೇಬಲ್ ಮೇಲುಗಡೆ ಗೋಣಿ ಚೀಲ ಹಾಕಿ ಕೆಲಸ ನಿರ್ವಹಿಸುತ್ತಿರುವದನ್ನು ದೃಶ್ಯದಲ್ಲಿ ಗಮನಿಸಬಹುದು.

ತಾಲೂಕಾ ಆಡಳಿತ ಭವನ ಮಿನಿ ವಿಧಾನಸೌಧದ ದಲ್ಲೇ ಈ ಪರಿಸ್ಥಿತಿಯಾದರೆ ಇದೆಂತಹ ನಿರ್ಲಕ್ಷ್ಯ, ಕಚೇರಿಯಲ್ಲಿ ಗಣಕ ಯಂತ್ರಗಳು ಕಾಗದಪತ್ರಗಳು ಇರುವ ಸಿಬ್ಬಂದಿಗಳು ಕೆಲಸ ಮಾಡುವ ಜಾಗದಲ್ಲೇ ಮಳೆಯಿಂದ ಸೋರುತ್ತಿದೆ ಎಂದಾದರೆ ಎಂತಹ ವಿಪರ್ಯಾಸ.

ಈ ಬಗ್ಗೆ ಬಾದಾಮಿ ತಾಲೂಕಾ ದಂಡಾಧಿಕಾರಿಯವರ ಗಮನಕ್ಕೆ ಬಂದಿಲ್ಲವೇ ಅಥವಾ ಸಿಬ್ಬಂದಿ ವರ್ಗದವರು ಕೆಲಸ ಮಾಡುವ ವಿಭಾಗಕ್ಕೆ ಬಾದಾಮಿ ತಹಶೀಲ್ದಾರ್ ಹೋಗಿಲ್ಲವೇ ? ತಾವಾಯಿತು ತಮ್ಮ ಚೆಂಬರ್ ಆಯಿತು ಎಂದು ಕರ್ತವ್ಯಕ್ಕೆ ಹಾಜರಾಗಿ ಹೋಗುತ್ತಿರುವರೆ ಎನ್ನುವ ರೀತಿ ಸಾಕಷ್ಟು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತವೆ ಬಾದಾಮಿ ಶಾಸಕರೇ ನೋಡಿ ಇದು ತಾಲೂಕಾ ಆಡಳಿತ ಭವನ ಮಿನಿ ವಿಧಾನಸೌಧದ ಕಟ್ಟಡದ ಪರಿಸ್ಥಿತಿ. ಇನ್ನಾದರೂ ಸೋರುತ್ತಿರುವ ಕಟ್ಟಡವನ್ನು ರಿಪೇರಿ ಮಾಡಿಸಲಿ ಎನ್ನುವುದು ಕರುನಾಡ ಕಂದ ಪತ್ರಿಕೆಯ ಕಳಕಳಿ.

ವರದಿ: ನಿಂಬಯ್ಯ ಕುಲಕರ್ಣಿ, ಬಾದಾಮಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!