ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಚರಣೆಗೆ ತರಲಾಗದ ಮಾತು ಮಂತ್ರಗಳಿಂದ ಪ್ರಯೋಜನವಿಲ್ಲ – ಶರಣಬಸವ ಶಾಸ್ತ್ರಿಗಳು

ಬಾಗಲಕೋಟೆ/ಮುಧೋಳ : 12 ನೇ ಶತಮಾನದಲ್ಲಿ ಸಮಾನತೆ ಎಂಬುದು ಅತ್ಯಂತ ಪರಕೀಯದ ವಿಷಯವಾಗಿತ್ತು. ಸಮಾಜ ಸುಧಾರಣೆಗೆ, ಧರ್ಮ ಸುಧಾರಣೆಗೆ ಏನೆಲ್ಲಾ ಕೇಳಲು ಸಾಧ್ಯವಿಲ್ಲ ಎನ್ನುವ ಕಾಲ ಅದಾಗಿತ್ತು. ಅಂತಹ ದಿನಗಳಲ್ಲಿ ಜನಿಸಿ ಬೆಳೆದ ಬಸವಣ್ಣ ಸಕಲರ ಧರ್ಮವನ್ನು ಸಕಲರಿಗಾಗಿ ಒದಗಿಸುವ ದೀಕ್ಷೆಗೆ ಬದ್ಧರಾಗಿದ್ದರು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.

ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ‌ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರಾವಣ ಸಂಭ್ರಮ 2025 ಶ್ರಾವಣಮಾಸದ ಅಂಗವಾಗಿ ಶುಕ್ರವಾರ ಪ್ರಾರಂಭಗೊಂಡ ಬಸವ ಪುರಾಣ ಕಾರ್ಯಕ್ರಮದ ಸಭೆಯ ಸನ್ನಿಧಿಯಲ್ಲಿ ಮಾತನಾಡುತ್ತಾ ಆಸ್ತಿಕ ಸಮಾಜವನ್ನು ಕಟ್ಟುವ ಕನಸು ಬಸವಣ್ಣನವರದಾಗಿತ್ತು.
ನಡೆ, ನುಡಿ, ಉಣ್ಣುವುದು, ಉಡುವುದು, ಮಾತನಾಡುವುದನ್ನು ಕಲಿಸಿದವ ಬಸವಣ್ಣ.
ಬಸವಣ್ಣ ಹೇಳಿದ ಮಾತು ಮಂತ್ರಗಳನ್ನು ಹೇಳಿದರೆ ಸಾಲದು ಆಚರಣೆಯೊಂದಿಗೆ ಕಾರ್ಯವು ಅನುಷ್ಠಾನಕ್ಕೆ ಬಂದಾಗ ನಮ್ಮ ನಾಡು ಕಲ್ಯಾಣ ಕರ್ನಾಟಕ ಆದೀತು ಎಂದರು.
ಈ ಸಂದರ್ಭದಲ್ಲಿ ಪೂಜ್ಯರಾದ ಸಿದ್ದಯ್ಯ ಸ್ವಾಮಿಗಳು ಹಿರೇಮಠ, ಮಹಾಲಿಂಗಯ್ಯ ಸ್ವಾಮಿಗಳು ಹಿರೇಮಠ, ಆಶ್ರಮದ ಕುಮಾರ್ ಗುರುಪ್ರಸಾದ್ ಸ್ವಾಮಿಗಳು, ಗ್ರಾಮ ಪಂಚಾಯತ್ ಸದಸ್ಯ ಪಿ ಬಿ ಸುನಗಾರ, ಹಿರಿಯ ಜನಪದ ಕಲಾವಿದರಾದ ಮುತ್ತವ್ವ ಲಕ್ಷ್ಮೇಶ್ವರ, ಭೌರಮ್ಮ ಹಿರೇಮಠ, ಅಖಿಲಾಂಡೇಶ್ವರಿ ಸಂಘದ ದ್ರಾಕ್ಷಾಯಿಣಿ ಮುಂತಾದವರು ಉಪಸ್ಥಿತರಿದ್ದರು. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಎಲ್ ಶಾಮಲಾ ಅವರು ಸ್ವಾಗತಿಸಿ, ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!