
ಬೆಳಗಾವಿ//ಅಥಣಿ : 27/07/2025 ರಂದು ಅಥಣಿ ಪಟ್ಟಣದ ಎಸ್ ಎಸ್ ಎಮ್ ಎಸ್ ಕಾಲೇಜಿನ ಖೋತ ಸಭಾ ಭವನದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಖಾದಿ ಗ್ರಾಮೋದ್ಯೋಗ ಸಂಘ (ರಿ.) ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ,ರಾಣಿ ಚೆನ್ನಮ್ಮ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಸನ್ಮಾನ್ಯ ಶ್ರೀ ಚಿದಾನಂದ ಲ. ಸವದಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಯಾವತ್ತೂ ನಾನು ನಿಮ್ಮ ಸಂಘದ ಜೊತೆ ಇರುತ್ತೇನೆ ನಿಮ್ಮ ಸಂಘಕ್ಕೆ ನನ್ನ ಕೈಲಾದಷ್ಟು ಅಳಿಲು ಸೇವೆ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ,ಪೂ,ಶ್ರೀ ಸೋಮಲಿಂಗೇಶ್ವರ ದೇವರುಷಿಗಳು ನೀಪನಾಳ, ಹಿರಿಯ ಮುಖಂಡರಾದ ಶ್ರೀ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಮ ಪೂಜಾರಿ, ಪುರಸಭೆಯ ಸದಸ್ಯರಾದ ಶ್ರೀ ರಾವಸಾಬ್ ಐಹೊಳೆ, ಸುರೇಶ್ ವಾಗ್ಮೂಡೇ, ವಕೀಲರಾದ ನಿತೀಶ್ ಪಟ್ಟಣ, ಅಪ್ಪು ಪೂಜಾರಿ, ಕಲಾವತಿ ಕಿತ್ತೂರ ಹಾಗೂ ಕಲಾವಿದರು ಮತ್ತು ಹಿರಿಯ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ. ವಿಠ್ಠಲ ಖೋಕಾಟೆ ಅಥಣಿ.



















