ಬಳ್ಳಾರಿ / ಕಂಪ್ಲಿ : ಕಂಪ್ಲಿಯ ಬಯಲಾಟ ಕಲಾವಿದ ಡಿ.ವೆಂಕಟೇಶ, ಹಳೆಕೋಟೆ ಮೊಸಳೆ ಸಂರಕ್ಷಕ ವೇಷಗಾರ ಮಲ್ಲಯ್ಯ ಇವರಿಗೆ ಹೊಸಪೇಟೆಯ ಸಂಗೀತ ಭಾರತಿ ಸಂಸ್ಥೆಯಿಂದ ಭಾನುವಾರ ಸಮಾಜ ಸೇವಾ ಭಾರ್ಗವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಭಾರತಿ ಅಧ್ಯಕ್ಷ ಎಚ್.ಪಿ.ಕಲ್ಲಂಭಟ್, ಧ್ವನಿ ಬೆಳಕು ತಂತ್ರಜ್ಞ ಕೆ.ಸುರೇಶ್ ಪ್ರಮುಖರಾದ ವೇಷಗಾರ ದೇವೇಂದ್ರ, ಬಂಗಿ ದೊಡ್ಡ ಮಂಜುನಾಥ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















