ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕ್ಷೌರಿಕ ಸಮಾಜದ “ನಿಜಸುಖಿ ಪ್ರಶಸ್ತಿಗೆ” ಬಸವರಾಜ ಹಡಪದ ಸುಗೂರ ಎನ್ ಆಯ್ಕೆ

ಕಲಬುರಗಿ: ಕಳೆದ ಮೂರೂವರೆ ದಶಕಗಳಿಂದಲೂ ಕಲೆ, ಸಾಹಿತ್ಯ, ಸಾಂಸ್ಕೃತಿಕ , ಸಾಮಾಜಿಕ. ದಾರ್ಮಿಕ ಸೇವೆ ಮತ್ತು ರಂಗಭೂಮಿ ನಾಟಕ ನಿಸ್ವಾರ್ಥ ಸೇವೆಯ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಗೌರವಾಧ್ಯಕ್ಷರು ಬಸವರಾಜ ತಂ. ಗುರಣ್ಣ ಹಡಪದ ಸುಗೂರ ಎನ್ ಅವರನ್ನು ಕ್ಷೌರಿಕ ವೃತ್ತಿಯಲ್ಲಿ ‘ನಿಜಸುಖಿ ಹಡಪದ ಅಪ್ಪಣ್ಣ’ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಹಾಗೂ ನಿಜಸುಖಿ ಚಾರಿಟೇಬಲ್ ಟ್ರಸ್ಟ್ ನ ಸಂಯೋಗದಲ್ಲಿ ಇದೇ ಜುಲೈ 31ರಂದು ಸುವರ್ಣ ಸಭಾ ಭವನ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಯಲ್ಲಿ ಕಾರ್ಯಕ್ರಮ ಏರ್ಪಡಿಸಿರುವ ರಾಜ್ಯ ಹಡಪದ ಸಮಾಜದ ಮಾಜಿ ಕಾರ್ಯಾಧ್ಯಕ್ಷ ಮತ್ತು ಕಲಬುರಗಿ ಜಿಲ್ಲೆಯ ಅಧ್ಯಕ್ಷರಾದ ಈರಣ್ಣ ಸಿ. ಹಡಪದ ಸಣ್ಣೂರ ಅವರ 41ನೇ ಜನ್ಮ ದಿನದ ನಿಮಿತ್ತವಾಗಿ ವಿವಿಧ ಕ್ಷೇತ್ರದ 41 ಸಾಧಕರಿಗೆ ಸಮಾಜಮುಖಿ ಕಾರ್ಯಕ್ರಮ ಸಮ್ಮೇಳನದಲ್ಲಿ ನಿಜಸುಖಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಮಾಜದ ಸಂಘಟನಾ ಜೊತೆಯಲ್ಲಿ ಹಡಪದ ಅಪ್ಪಣ್ಣ ಕ್ಷೌರಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವರಾಜ ಹಡಪದ ಸುಗೂರ ಎನ್ ಜಿ ಯವರ ಚಿತ್ತಾಪುರ ತಾಲೂಕಿನ ಹಡಪದ ಅಪ್ಪಣ್ಣ ಸಮಾಜದ ತಾಲ್ಲೂಕು ಅಧ್ಯಕ್ಷರಾಗಿ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನಲ್ಲಿ ಸಮಾಜದ ಜನತೆಗೆ ಸಭೆ ಸಮಾರಂಭ ಕಾರ್ಯಕ್ರಮ ಮಾಡಲು ಸ್ವತಃ ಜಾಗ ಖರೀದಿ ಮಾಡಿ. ಅದೇ ಸಮಾಜದ ಜಾಗದಲ್ಲಿ ಸಮುದಾಯ ಭವನ ಕಟ್ಟಡ ಮಾಡಿ ಆಗ ಮಾಜಿ ಶಾಸಕ ದಿಂ.ವಾಲ್ಮೀಕಿ ನಾಯಕ ಅವರ ಹಾಗೂ ಸಮಾಜದ ಜನತೆಯ ಸಮ್ಮುಖದಲ್ಲಿ ಉದ್ಘಾಟಿಸಿದರು ಮತ್ತು ಶಹಾಬಾದ ನಗರದಲ್ಲಿ ಸಹ ಸಮಾಜದ ಜನತೆಯ ದೇಣಿಗೆಯನ್ನು ಸಂಗ್ರಹಿಸಿ ಶಹಾಬಾದ ತಾಲ್ಲೂಕು ಬಸವೇಶ್ವರ ನಗರದಲ್ಲಿ ಇರುವ ಹಡಪದ ಅಪ್ಪಣ್ಣ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಪಣ ತೊಟ್ಟು ,ದೇವಸ್ಥಾನ ಹಾಗೂ ಮೂರ್ತಿ ಸ್ಥಾಪನೆ ಅನೇಕ ಮಠಾಧೀಶರು ಮತ್ತು ಸಮಾಜದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅನ್ನದಾನಿ ಭಾರತಿ ಸ್ವಾಮಿಗಳು ತಂಗಡಗಿ, ಮತ್ತು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಆಗಿನ ರಾಜ್ಯಾಧ್ಯಕ್ಷರಾದ ಅಣ್ಣಾರಾವ ನರಿಬೋಳ ಮತ್ತು ಸಮಾಜದ ಬಂಧುಗಳಾದ ಬಸವರಾಜ ಹಡಪದ ಹಳ್ಳಿ,ಪ್ರಕಾಶ ಹಡಪದ ಮಲಕೋಡ, ಭಗವಂತ ಹಡಪದ ಕಿರಣಗಿ, ಜಗನ್ನಾಥ ಶಂಕರವಾಡಿ, ನಾಗಣ್ಣ ಮುತ್ತಕೋಡ, ಹಾಗೂ ಸಮಾಜದ ಅನೇಕ ಹಿರಿಯರ ಸಮ್ಮುಖದಲ್ಲಿ ಸ್ಥಾಪನೆ ಮಾಡಿದರು.
ಇವರ ಜೊತೆಯಲ್ಲಿ ಸಮಾಜದ ಬಂಧುಗಳ ಸಹಕಾರ ಇದ್ದು ನಾಟಕ ರಂಗಭೂಮಿ ಕಲಾವಿದರು ಮತ್ತು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂವತ್ತೈದು ವರ್ಷಗಳಿಂದ ಸಮಾಜ ಸೇವೆ ಮೌಢ್ಯ ನಿರ್ಮೂಲನೆಯ ಕುರಿತಾಗಿ ಹಲವಾರು ವೈಚಾರಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಮತ್ತು ಕರೋನಾ ಸಂದರ್ಭದಲ್ಲೂ ಸಹ ಹಗಲಿರುಳು ಶ್ರಮಿಸಿ ಅನಾಥ ರಿಗೆ ಅಂಧರಿಗೆ, ನಿರ್ಗತಿಕರಿಗೆ ಮಕ್ಕಳ ಮೂಲಕ ಸಾವಿರಾರು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಮಾಡಲು ಸ್ಪಂದಿಸಿದ್ದಾರೆ. ಇವರಿಗೆ ಈಗಾಗಲೇ ಬಾಗಲಕೋಟೆ ಜಿಲ್ಲೆಯ ಸಮಾವೇಶ ದಲ್ಲಿ ಸಹ ನಿಜಸುಖಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ಕಲಬುರಗಿ ಜಿಲ್ಲೆಯ ‌ಜಯ ನಗರದ ಬಸವ ಸಮಿತಿ ಜಿಲ್ಲಾಧ್ಯಕ್ಷರಾದ ಡಾ.ವಿಲಾಶವತಿ ಖೋಭಾ ತಾಯಿಯವರು ಸಹ ‘ಕಾಯಕಯೋಗಿ ‘ ಪ್ರಶಸ್ತಿ ನೀಡಿ ಗೌರವಿಸಿದರು.
ಬಸವರಾಜ ಹಡಪದ ಸುಗೂರ ಎನ್ ಜಿ ಯವರು ಜಿಲ್ಲಾ ಗೌರವಾಧ್ಯಕ್ಷರು ಆದ ಮೇಲೆ ಸಮಾಜದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳು ಜೊತೆಯಲ್ಲಿ ಸಮಾಜದ ಪರವಾಗಿ ಅನೇಕ ಹೋರಾಟ ನಡೆಸಿ. ಮತ್ತು ಸಮಾಜದ ಬೃಹತ್ ಸಮಾವೇಶ ಕಾರ್ಯಕ್ರಮಗಳನ್ನು ಇಮ್ಮಡಿಗೊಳಿಸಿದ್ದಾರೆ. ಈ ಮೂಲಕ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿರ್ಗತಿಕರಿಗೆ, ಜನಸಾಮಾನ್ಯರಿಗೆ,ವಿಶೇಷ ಚೇತನರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿ ಅವರ ವೃತ್ತಿಪರ ಕೆಲಸ ಕಾರ್ಯಗಳನ್ನು ರೂಪಿಸಿದ ಕೀರ್ತಿ ಬಸವರಾಜ ಹಡಪದ ಸುಗೂರ ಎನ್ ಅವರಿಗೆ ಸಲ್ಲುತ್ತದೆ. ಇವರಿಗೆ ಪ್ರೀತಿಯಿಂದ ನೂರಾರು ಕಾರ್ಯಕ್ರಮಗಳ ಹಡಪದ ಸಮಾಜದ ” ಉಕ್ಕಿನ ಮನುಷ್ಯ ಎಂದೇ ಕರೆಯುತ್ತಾರೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!