ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆ
ಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆ
ಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡ
ಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I
ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆ
ಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆ
ಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳು
ಸೋನೆಗೆ ಸಿಲುಕಿದ ಮಂದಿಯ ಮಂದೆಗಳು ನಾವ್ಗಳು.I೨I
ಕಾವ್ಯನಾಮ : ಅರಸು
✍🏻 ದೇವರಾಜು ಬಿ ಎಸ್ ಹೊಸಹೊಳಲು.



















