ಬಾಗಲಕೋಟೆ/ ಹುನಗುಂದ :ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣರ ೪೪ ನೇ ಪುಣ್ಯ ಸ್ಮರಣೆಯ ಪ್ರಯುಕ್ತ ಕೃಷಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆಗೈದ ಆಸಕ್ತಿ ಮಹಿಳಾ ಹಾಗೂ ಪುರುಷ ಕೃಷಿ ಸಾಧಕರು ತಮ್ಮ ಕೃಷಿ ಸಾಧನೆಯ ಸ್ವವಿವರ ಮಾಹಿತಿಯೊಂದಿಗೆ ದಿನಾಂಕ. ೧೦ ನೇ ಆಗಸ್ಟ್ ೨೦೨೫ ರೊಳಗೆ ಅಧ್ಯಕ್ಷರು ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣ ತತ್ವ ದರ್ಶನ ಸಮಿತಿ,ಕೋರ್ಟ್ ಹತ್ತಿರ,ಶರಣರ ಕರ್ತೃ ಗದ್ದುಗೆ ಹುನಗುಂದ..೫೮೭೧೧೮,
ಬಾಗಲಕೋಟೆ ಜಿಲ್ಲೆ.
+91 94491 42277,
ವಿಳಾಸಕ್ಕೆ ತಲುಪಿಸುವುದು.
ದಿನಾಂಕ ೨೩-೮-೨೦೨೫ ರಂದು ಜರುಗುವ ಪುಣ್ಯ ಸ್ಮರಣೆಯಲ್ಲಿ ಆಯ್ಕೆಗೊಂಡ ಒಬ್ಬರು ಮಹಿಳಾ ಮತ್ತು ಇಬ್ಬರು ಪುರುಷ ಕೃಷಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕಾಯಕಯೋಗಿ ಶರಣ ತತ್ವ ದರ್ಶನ ಸಮಿತಿ ಹುನಗುಂದ ಅಧ್ಯಕ್ಷರಾದ ವಿ. ಎಂ.ಹಾದಿಮನಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















