ಯಾದಗಿರಿ/ಗುರುಮಠಕಲ್: ತಾಲೂಕಿನ ಸಮಸ್ತ ವಿಕಲಚೇತನರಿಗೆ ಎಪಿಡಿ ಸಂಸ್ಥೆಯ ವತಿಯಿಂದ ನಾಳೆ ಜುಲೈ 29 ಮಂಗಳವಾರ ಗುರುಮಠಕಲ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರು ಬಳಸುವ ಸಾಧನ ಸಲಕರಣೆಗಳ ಮಾಪನ ಶಿಬಿರವನ್ನು ಆಯೋಜಿಸಲಾಗಿದೆ.
ಈ ಒಂದು ದಿನದ ಕಾರ್ಯಕ್ರಮದಲ್ಲಿ ಅವರ ಅಂಗವಿಕಲತೆಗೆ ಅನುಗುಣವಾಗಿ ಅಗತ್ಯ ಸಾಧನ ಸಲಕರಣೆಗಳ ಮಾಪನವನ್ನು ಮಾಡಿ, ತದ ನಂತರ ವಿತರಿಸಲಾಗುವುದು ಎಂದು ಎಪಿಡಿ ಸಂಸ್ಥೆಯ ತಾಲೂಕಿನ ಸಂಚಾಲಕರಾದ ವಿರುಪಾಕ್ಷ ಮಾಲಿಪಾಟೀಲ ತಿಳಿಸಿದ್ದಾರೆ.
ಈ ಶಿಬಿರದ ಸದುಪಯೋಗವನ್ನು ತಾಲೂಕಿನ ಎಲ್ಲಾ ವಿಕಲಚೇತನರು ಪಡೆಯಲು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ವಿಕಲಚೇತನರು ಬರುವಾಗ ಪಾಸ್ ಪೋರ್ಟ್ ಭಾವಚಿತ್ರ, ಆಧಾರ್ ಕಾರ್ಡ್ ನಕಲು ಪ್ರತಿ, UDID ಕಾರ್ಡ್ ನಕಲು ಪ್ರತಿ ತರಬೇಕು.
ವರದಿ: ಜಗದೀಶ್ ಕುಮಾರ್ ಭೂಮಾ



















