ಬಳ್ಳಾರಿ/ ಕಂಪ್ಲಿ : ಬಳ್ಳಾರಿ ನಗರದ ಎಸ್.ಜಿ.ಆರ್.ಸಿ.ಎಂ. ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಬೆಂಗಳೂರು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಬಳ್ಳಾರಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ನೇತೃತ್ವದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ ಜಿಲ್ಲಾ ಪತಂಜಲಿ ಸಮಿತಿ, ಶಾರದಾ ಸೇವಾ ಟ್ರಸ್ಟ್ ಹಾಗೂ ಬಳ್ಳಾರಿ ವೈಕಿಂಗ್ ರೌಂಡ್ ಟೇಬಲ್, ಮತ್ತು ಬಳ್ಳಾರಿ ವೈಕಿಂಗ್ ಲೇಡೀಸ್ ಸರ್ಕಲ್ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ನಲ್ಲಿ ಕಂಪ್ಲಿ ಪಟ್ಟಣದ ಯಕ್ಷಾ ಯೋಗ ಸಂಸ್ಥೆಯ ಯೋಗ ವಿದ್ಯಾರ್ಥಿಗಳು ಸಾಧನೆ ಮಾಡಿ ಕೀರ್ತಿ ಪತಾಕಿ ಹಾರಿಸಿದ್ದಾರೆ.
ಇಲ್ಲಿನ ಅಕಾಡೆಮಿ ಸಂಸ್ಥೆಯ 12 ಮಕ್ಕಳು ಯೋಗ ಸ್ಫರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಬಂಗಾರದ ಪದಕದ ಜೊತೆಗೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತಂದಿದ್ದಾರೆ.
ಜಿಲ್ಲಾ.ಮಟ್ಟದ ಯೋಗ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳಾದ ಯೋಗೇಶ, ಮಣಿಕಂಠ, ಶಶಾಂಕ, ಈ.ವಿರೇಶ ಪ್ರಥಮ ಸ್ಥಾನ ಪಡೆಯುವ ಮೂಲಕ 3 ಬಂಗಾರದ ಪದಕ ಗಳಿಸಿದ್ದಾರೆ. ಕಗ್ಗಲ್ ಲೋಕೇಶ ಪ್ರಥಮ ಪಡೆದು 2 ಬಂಗಾರದ ಪದಕ ಪಡೆದಿದ್ದಾರೆ. ಬಾಲಕಿಯರಲ್ಲಿ ಎಸ್.ಭೂಮಿಕ, ಸಿ.ನಯನ ಇವರು ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕದೊಂದಿಗೆ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ಎಸ್.ಪೂಜಾ 2ರಲ್ಲಿ ಪಥ್ರಮ ಸ್ಥಾನ ಪಡೆದು ಬಂಗಾರದ ಪದಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ನವ್ಯ ಎರಡನೇ ಸ್ಥಾನ, ಸಿಂಧು ತೃತೀಯ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಉತ್ತಮ ಕೀರ್ತಿ ತಂದಿದ್ದಾರೆ. ಕಂಪ್ಲಿ ಯಕ್ಷಾ ಯೋಗ ಅಕಾಡೆಮಿ ಸಂಸ್ಥಾಪಕಿ ಎಂ.ಶಾಮಲಮ್ಮ. ಕರ್ನಾಟಕ ಯೋಗಾಸನ ಕ್ರೀಡೆ ಸಂಸ್ಥೆ ಅಧ್ಯಕ್ಷ ನಿರಂಜನ ಮೂರ್ತಿ, ಜಿಲ್ಲಾ ಯೋಗಾಸನ ಕ್ರೀಡೆ ಸಂಸ್ಥೆ ಕಾರ್ಯದರ್ಶಿ ಅಂಜಿನಪ್ಪ ಸೇರಿ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















