
ಬೆಳಗಾವಿ: ಅಥಣಿ ಪಟ್ಟಣದ ಎಸ್, ಎಸ್, ಎಮ್ ಎಸ್ ಕಾಲೇಜಿನ ಖೋತ ಸಭಾ ಭವನದಲ್ಲಿ ನಡೆದ ಅಥಣಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಘಟಕ ಅಥಣಿ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ನಿಮಿತ್ಯ ಮುಕ್ತ ರಸ ಪ್ರಶ್ನೆ ವಿಜೇತಕರಿಗೆ ಬಹುಮಾನ ವಿತರಣೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಥಣಿಯ ಸುಕ್ಷೇತ್ರ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು ಹಾಗೂ ಸಸಿಗೆ ನೀರು ಹಾಕುವುದರ ಮೂಲಕ ಮಾಜಿ ಉಪ ಮುಖ್ಯಮಂತ್ರಿಗಳು, ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ಉದ್ಘಾಟಿಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ಅಥಣಿಯ ಮಾಜಿ ಶಾಸಕರುಗಳಾದ ಮಹೇಶ ಕುಮಟಳ್ಳಿ, ಶಹಜಹಾನ ಡೋOಗರಗಾವ ಆಗಮಿಸಿದ್ದರು.
ಇದೇ ವೇಳೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ಮಾತನಾಡಿ ನೈಜ ಸುದ್ದಿಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವಂತಹ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ, ನಾನು ಯಾವಾಗಲೂ ಈ ಕಾರ್ಯನಿರತ ಪತ್ರಕರ್ತರ ಜೊತೆ ಇರುತ್ತೇನೆ ಎಂದು ಹೇಳಿದರು.
ಮತ್ತು ಇದೇ ವೇಳೆ ಇದೇ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಶಾಸಕರು ಸಂವಾದ ಕೂಡಾ ನಡೆಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗಳಿಗೆ , ಸಮಸ್ಯೆಗಳಿಗೆ ಸರಿಯಾದ ಉತ್ತರ ಕೊಡುವುದಲ್ಲದೆ ಅದಕ್ಕೆ ಪರಿಹಾರ ಕೂಡಾ ಹೇಳಿದರು.
ಮತ್ತು ಮುಕ್ತ ರಸಪ್ರಶ್ನೆ ವಿಜೇತರಿಗೆ ಬಹುಮಾನ ಕೂಡ ವಿತರಿಸಲಾಯಿತು ಮತ್ತು ಗಣ್ಯ ವ್ಯಕ್ತಿಗಳಿಗೆ ಸತ್ಕಾರ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿ ಪಿ ಐ ಸಾಹೇಬರಾದ ಸಂತೋಷ್ ಹಳ್ಳೂರ, ಡಾಕ್ಟರ್ ಮಲ್ಲಿಕಾರ್ಜುನ ಹಂಜಿ, ಬಾಳಸಾಹೇಬ ಲೋಕಾಪುರ, ಅಶೋಕ್ ಪೂಜಾರಿ, ಯುವ ಮುಖಂಡರಾದ ಮಹಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ, ಕಾರ್ಯನಿರತ ಪತ್ರಕರ್ತರ ತಾಲೂಕು ಅಧ್ಯಕ್ಷರಾದ ಪರಶುರಾಮ ನಂದೀಶ್ವರ, ಮತ್ತು ಪತ್ರಕರ್ತರಗಳಾದ , ಅಜಿತ ಕಾಂಬಳೆ, ಶಿವಕುಮಾರ ಅಪರಾಜ, ಅಣ್ಣಸಾಬ ತೆಲಸಂಗ, ರಾಕೇಶ್ ಮೈಗೂರ, ರಮೇಶ್ ಬಾಡವಾಡಗಿ, ಸಂತೋಷ ಬಡಕಂಬಿ, ಗೋವಿಂದ್ ಗಾಡಿವಡ್ಡರ, ಇನ್ನೂ ಅನೇಕ ಪತ್ರಕರ್ತರು ಹಾಗೂ ಹಿರಿಯ ಮುಖಂಡರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿಗಾರ. ವಿಠ್ಠಲ ಖೋಕಾಟೆ ಅಥಣಿ.



















