ಬೀದರ್/ಬಸವಕಲ್ಯಾಣ: ದಿ. 30/07/2025 ರಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣದ) ತಾಲೂಕಾ ಘಟಕದ ವತಿಯಿಂದ ಬಸವಕಲ್ಯಾಣ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಸರಬರಾಜು ಆಗುತ್ತಿರುವ ಆಹಾರ ಧಾನ್ಯಗಳಾಗಲಿ, ಮೊಟ್ಟೆಗಳಾಗಲಿ, ಅಥವಾ ರುಚಿಯಾದ ಹಿಟ್ಟಾಗಲಿ, ಎಲ್ಲಾ ಪದಾರ್ಥಗಳು ಕಳಪೆ ಮಟ್ಟದಾಗಿರುತ್ತವೆ. ನಾವು ಖುದ್ದಾಗಿ ಬಸವಕಲ್ಯಾಣ ತಾಲೂಕಿನ ಎರಬಾಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಂಡರಗೇರಾ ತಾಂಡಾದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿಯಾದಾಗ ಅಲ್ಲಿನ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡಲು ಬಂದಂತಹ ವಿದ್ಯಾರ್ಥಿಗಳು ಊಟ ಮಾಡುವುದಾಗಲಿ, ಮೊಟ್ಟೆ ಸೇವಿಸುವುದಾಗಲಿ ನೋಡಿದರೇ ಅಲ್ಲಿನ ಮಕ್ಕಳು ಮುಂದೆ ಒಂದು ದಿನ ಆರೋಗ್ಯದಿಂದ ಬಳಲುವುದಂತೂ ಸತ್ಯ ಎಂದು ನಮಗೆ ಅನಿಸಿತು. ಏಕೆಂದರೇ, ಅಲ್ಲಿನ ಅಡುಗೆಯಲ್ಲಿ ಯಾವುದೇ ತರಹದ ತರಕಾರಿ ಇಲ್ಲದೇ ಅಹಾರ ತಯ್ಯಾರು ಮಾಡುತ್ತಿದ್ದಾರೆ. ಅದೇ ರೀತಿ ಅಲ್ಲಿ ಬಂದಂತಹ ಮೊಟ್ಟೆಯಲ್ಲಿ ಬರೀ ನೀರು ತುಂಬಿ ಕೆಟ್ಟು ಹೋಗಿ ದುರ್ವಾಸನೆ ಬರುತ್ತಿದ್ದರೂ ಮಕ್ಕಳು ಅದನ್ನೇ ಆಹಾರ ರೂಪದಲ್ಲಿ ಸೇವಿಸುತ್ತಿದ್ದಾರೆ. ಅಲ್ಲಿನ ಅಂಗನವಾಡಿ ಕಾರ್ಯಕರ್ತೆಗೆ ಕೇಳಿದರೆ ಉಢಾಫೆ ಉತ್ತರ ಕೊಡುತ್ತಿದ್ದಾರೆ. ಇದೇ ತರಹ ಬಸವಕಲ್ಯಾಣ ತಾಲೂಕಿನಾದ್ಯಂತ ಇದೇ ಸಮಸ್ಯೆ ಇದೇ ಅದಲ್ಲದೇ ಗರ್ಭೀಣಿಯರಿಗೆ ಹಾಗೂ ಬಾಳಂತಿಯರಿಗೆ ಉತ್ತಮವಾದ ಪೌಷ್ಟಿಕೌಂಶದ ಆಹಾರ ವಿತರಣೆ ಮಾಡುತ್ತಿಲ್ಲ ಹಾಗೂ ಅವರಿಗೆ ಬರುವ ತಿಂಗಳ ಸಹಾಯಧನ ಕೂಡಾ ಕೊಡುತ್ತಿಲ್ಲ ಇದಕ್ಕೆ ಸಂಬಂಧಪಟ್ಟಂತೆ ನಾವು ಹಿಂದೆ ಒಂದು ಸಲ ಶಿಶು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೂ ಸಹ ತಂದರೂ ಅವರು ಯಾವುದೇ ತರಹದ ಕ್ರಮ ತೆಗೆದುಕೊಂಡಿರುವುದಿಲ್ಲ ಆದ ಕಾರಣ ಸಂಬಂಧಪಟ್ಟ ಆಹಾರ ಸರಬರಾಜು ಹಾಗೂ ಮೊಟ್ಟೆ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರ ಪರವಾನಿಗೆ ರದ್ದು ಮಾಡಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಮಾನ್ಯ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ದ ವತಿಯಿಂದ ಪತ್ರದ ಮುಖಾಂತರ ದೂರನ್ನು ಕೊಟ್ಟರು ಈ ಸಂಧರ್ಭದಲ್ಲಿ ಕ.ರ.ವೇ. ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಚರಣಜೀತ್ ಅಣದುರೆ, ತಾಲೂಕಾ ಅಧ್ಯಕ್ಷರಾದ ಮಾಂತೇಶ ಎಸ್. ಗೌರಕರ್, ಉಪಾಧ್ಯಕ್ಷರಾದ ಸುಧೀರ ಕಾಂಬಳೆ, ಕಾರ್ಯದರ್ಶಿ ಧಮ್ಮವೀರ ಗೋಡಬೋಲೆ, ನಗರ ಅಧ್ಯಕ್ಷರಾದ ರಾಜಕುಮಾರ ಮುಡಬೀಕರ್, ಕಾರ್ಯಕರ್ತರಾದ ಅಮರ್ ಮೀರ್ಲಿ, ಧನರಾಜ, ಬಜರಂಗ ಹಾಗೂ ಇತರ ಕಾರ್ಯಕರ್ತರುಗಳು ಭಾಗಿಯಾಗಿದ್ದರು.
ಅದೇ ರೀತಿ ಒಂದು ವೇಳೆ ಕಳಪೆ ಮಟ್ಟದ ಆಹಾರ ಹಾಗೂ ಮೊಟ್ಟೆ ಸರಬರಾಜು ಮಾಡುವುದು ನಿಲ್ಲದೇ ಇದ್ದಲ್ಲಿ ನಾವು ರಸ್ತೆಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಕ. ರ. ವೇ. ಸ್ವಾಭಿಮಾನಿ ಬಣದ ತಾಲೂಕಾ ಅಧ್ಯಕ್ಷರಾದ ಮಹಾಂತೇಶ ಎಸ್. ಗೌರಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















